ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ರಿ.) ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ವಾರ್ಷಿಕ ಮಹಾಸಭೆಯು ನೆಕ್ಕಿಲದಲ್ಲಿ ಸಮಿತಿ ಅಧ್ಯಕ್ಷರಾದ F H ಮುಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಯ್ಯಿದ್ ಸಾಬಿತ್ ಸಖಾಫಿ ತಂಙಳ್ ಪಾಟ್ರಕೋಡಿ ದುಆ ನೆರವೇರಿಸಿದರು. ನೆಕ್ಕಿಲ ಜುಮಾ ಮಸ್ಜಿದ್ ಮುದರ್ರಿಸ್ ಝಿಯಾದ್ ಸಖಾಫಿ ಬಾರೆಬೆಟ್ಟು ಉದ್ಘಾಟಿಸಿ, ಎಸ್ಸೆಸ್ಸೆಫ್ ರಾಜ್ಯ ಕ್ಯಾಬಿನೆಟ್ ಕಾರ್ಯದರ್ಶಿ ಅಲಿ ತುರ್ಕಳಿಕೆ ಸಂಘಟನಾ ತರಗತಿ ನಡೆಸಿಕೊಟ್ಟರು.
ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಉರುವಾಲುಪದವು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಹಕೀಂ ಕಳಂಜಿಬೈಲ್ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಉಬೈದುಲ್ಲಾರವರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರು: ಇಂಜಿನಿಯರ್ ಶಫೀಕ್ ಸಅದಿ ಈಶ್ವರಮಂಗಳ, ಉಪಾಧ್ಯಕ್ಷರು: ಸಿದ್ದೀಕ್ ಹಿಮಮಿ ಸಖಾಫಿ ಸುಳ್ಯ, ಪ್ರಧಾನ ಕಾರ್ಯದರ್ಶಿ: ನಿಯಾಝ್ ಎಲಿಮಲೆ, ಫಿನಾನ್ಸ್ ಕಾರ್ಯದರ್ಶಿ: ಇಂಜಿನಿಯರ್ ಜಂಶಾದ್ ಕಂಬಳಬೆಟ್ಟು, ಕಾರ್ಯದರ್ಶಿಗಳಾಗಿ ಶರೀಫ್ ಸಖಾಫಿ ಉಜಿರೆಬೆಟ್ಟು(ದಅವಾ), ಸ್ವಬಾಹ್ ಹಿಮಮಿ ಸಖಾಫಿ ಸುಳ್ಯ(ಸಿ. ಸಿ), ಕಾರ್ಯದರ್ಶಿ: ಶರೀಫ್ ಕಲ್ಲಾಜೆ(ರೈಂಬೋ), ಉಬೈದುಲ್ಲಾ ಬೋವು(ಮೀಡಿಯಾ), ಹಸೈನಾರ್ ನೆಕ್ಕಿಲ(ರೀಡ್ ಪ್ಲಸ್), ನವಾಝ್ ಮಾವಿನಕಟ್ಟೆ(ವಿಸ್ಡಂ), ಮುಬೀನ್ ಉಜಿರೆ(ಕ್ಯೂಡಿ), ಮುಹ್ಸಿನ್ ಕಟ್ಟತ್ತಾರು(ಐಟಿ), ಸ್ವಾದಿಕ್ ಕಲ್ಲುಗುಂಡಿ(ಕ್ಯಾಂಪಸ್) ಹಾಗೂ ಸದಸ್ಯರಾಗಿ ರಶೀದ್ ಮಡಂತ್ಯಾರು, ಅತಾವುಲ್ಲ ಹಿಮಮಿ ಕುಪ್ಪೆಟ್ಟಿ,ಇಬ್ರಾಹಿಂ ಕೋಡಪದವು, ಸಯ್ಯದ್ ಸಾಬಿತ್ ತಂಙಳ್ ಪಾಟ್ರಕೋಡಿ, ಅಬ್ದುಲ್ ಲತೀಫ್ ಅಹ್ಸನಿ ಮಲೆಬೆಟ್ಟು, ಆಬಿದ್ ಸಖಾಫಿ ಪೆರುವಾಯಿ, ಶಫೀಕ್ ಅಹ್ಸನಿ ಕಾಮಿಲ್ ಸಖಾಫಿ, ಸಾಬಿತ್ ಹಿಕಮಿ ಎಲಿಮಲೆ, ಅಬೂಬಕ್ಕರ್ ಸಿದ್ದೀಕ್ ಬೋವು, ನೌಫಲ್ ಮರ್ಝೂಖಿ ಸಖಾಫಿ ಶಿರ್ಲಾಲು, ಫಿರೋಝ್ ಮುಈನಿ ತುರ್ಕಳಿಕೆ ಇವರನ್ನು ಆಯ್ಕೆ ಮಾಡಲಾಯಿತು.
ರಶೀದ್ ಮಡಂತ್ಯಾರು ಸ್ವಾಗತಿಸಿ, ಸಿದ್ದೀಕ್ ಹಿಮಮಿ ವಂದಿಸಿದರು.