janadhvani

Kannada Online News Paper

ಮಹಾತ್ಮರ ಸ್ಮರಣೆ ಈಮಾನಿನ ಒಂದು ಭಾಗ ಕುದ್ರೋಳಿ ಮಖಾಂ ಉರೂಸ್ ನಲ್ಲಿ ಮನ್ನರ್ ಕಾಡ್ ತಂಙಳ್

ಮಂಗಳೂರು : ಮಂಗಳೂರು ಕುದ್ರೋಳಿ ಕರ್ಬಲಾ ಕಂಪೌಂಡಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ)ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುತ್ತಾ ಬರುವ ಉರೂಸ್ ಕಾರ್ಯಕ್ರಮದ
ಸಮಾರೋಪ ಸಮಾರಂಭ ಪೆಬ್ರವರಿ 8 ಶನಿವಾರ ಇಶಾ ಬಳಿಕ ಸೌಹಾರ್ದ ಹಾಗೂ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭ ದ
ನೇತೃತ್ವ ಅಸ್ಸಯ್ಯಿದ್ ಸೈಫುದ್ದೀನ್ ಜಮಾಲುಲೈಲಿ ತಂಙಳ್ ಫೈಝಿ ಮನ್ನಾರ್‌ಕಾಡ್ ವಹಿಸಿ ಅವುಲಿಯಾಗಳ‌ ಸ್ಮರಣೆ ಈಮಾನಿನ ಒಂದು ಭಾಗ‌ ಎಂದು ವಿವರಿಸಿದರು.


ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ ಮಾತಾಡಿ‌ ಮಹಾತ್ಮರ ಗೇಲಿ ಮಾಡುವವರಲ್ಲಿ ಸೇರಿಕೊಂಡು ಈಮಾನ್ ನಷ್ಟ ಪಡದಂತೆ ಕಾಪಾಡಿಕೊಳ್ಳಿ ಎಂದು ಜಾಗೃತಿ ಮೂಡಿಸಿದರು ಜ| ಮುಸ್ತಾಕ್ ಅಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ವಹಿಸಿದ್ದರು.
ಬಹು| ಕೆ ಎಸ್ ರಿಯಾಝ್ ಪೈಝಿ ಕಕ್ಕಿಂಜೆ ಖತೀಬರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಮಾತಾಡಿ ಸಾದಾತುಗಳ ಗೌರವ ವಿವರಿಸಿದರು.
ಬಹು| ಪಿ.ಎ. ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಖತೀಬರು ಕಂಡತ್‌ಪಳ್ಳಿ ಜುಮಾ ಮಸೀದಿ ಸೌಹಾರ್ದ ಸಮಾರಂಭ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ
ಬಹು! ಅಲಿ ಫೈಝಿ ಸದರ್ ಮುಅಲ್ಲಿಂ ನಡುಪಳ್ಳಿ
ಬಹು ! ಸಿರಾಜ್ ಫೈಝಿ‌ ಮುಅದ್ದಿನ್ ನಡುಪಳ್ಳಿ
ಬಹು! ತ್ವಹಿಬ್ ಫೈಝಿ ಸದಸ್ಯರು ನಡುಪಳ್ಳಿ
ಶ್ರೀ ಪದ್ಮರಾಜ್ ಆರ್ ಪೂಜಾರಿ ಕಾರ್ಯದರ್ಶಿ, ಕೆಪಿಸಿಸಿ
ಜ| ಸಂಶುದ್ಧೀನ್ ಎಚ್.ಬಿ.ಟಿ ಕಾರ್ಪೋರೇಟರ್, ಕುದ್ರೋಳಿ
ಹಾಜಿ ಬಿ. ಅಬೂಬಕ್ಕರ್ ಮಾಜಿ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಫಝಲ್ ಮುಹಮ್ಮದ್ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ
ಜ| ಎಂ. ಅಬ್ದುಲ್ ಅಝೀಝ್ ಮಾಜಿ ಕಾರ್ಪೋರೇಟರ್, ಕುದ್ರೋಳಿ
ಜ| ಎನ್.ಕೆ ಅಬೂಬಕ್ಕರ್ ಅಧ್ಯಕ್ಷರು, ಎಸ್.ಕೆ.ಎಸ್ಸೆಸ್ಸೆಫ್ ಕುದ್ರೋಳಿ ಯುನಿಟ್
ಜ ! ವಹ್ಹಾಬ್ ಕುದ್ರೋಳಿ ಪ್ರ ಕಾರ್ಯದರ್ಶಿ ಕಾರ್ಮಿಕ ಘಟಕ ಕರ್ನಾಟಕ
ಜ! ಬಿ ಎ ಇಸ್ಮಾಯಿಲ್ ನಿಕಟಪೂರ್ವ ಅಧ್ಯಕ್ಷ ರು ಎಸ್ ಕೆ ಎಸ್ ಎಸ್ ಎಫ್ ಕುದ್ರೋಳಿ ಯುನಿಟ್
ಜ! ಹಾಜಿ ಅಲ್ತಾಫ್ ಉಪಾಧ್ಯಕ್ಷ ರು ದರ್ಗಾ ಸಮಿತಿ
ಇಮ್ರಾನ್ ಬಂದರ್ ,ಸ್ಥಳೀಯ ಕಾಂಗ್ರೆಸ್ ನಾಯಕರು,
ಅಸ್ಲಂ ಸದಸ್ಯರು ನಡುಪಳ್ಳಿ
ಅನ್ವರ್ ಸಿಪಿಸಿ ಸದಸ್ಯರು ನಡುಪಳ್ಳಿ
ಜ| ಕೆ.ಹೆಚ್.ಬಿ ಅಬ್ದುಲ್ಲ ಕೋಶಾಧಿಕಾರಿ, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ
ಜ| ಹಾಜಿ ಕೆ. ಕಬೀರ್ ಸದಸ್ಯರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿದರು ತಿಳಿಸಿದ್ದಾರೆ.