janadhvani

Kannada Online News Paper

ಸಯ್ಯಿದ್ ಜಿಫ್ರಿ ತಂಙಳ್ ವಿರುದ್ಧ ಟೀಕೆ- ಸಮಸ್ತ ಮುಶಾವರ ಸದಸ್ಯ ಮುಸ್ತಫಲ್ ಫೈಝಿ ಅಮಾನತು

ತಡವಾಗಿ ವಾಹನ ಹತ್ತಿದವರಲ್ಲ ದಿಕ್ಕನ್ನು ನಿರ್ಧರಿಸಬೇಕಾದ್ದು ಹೊರತು, ಮೊದಲು ವಾಹನ ಹತ್ತಿದವರು ಹೇಳುವ ಕಡೆ ವಾಹನವನ್ನು ತಿರುಗಿಸಬೇಕು ಎಂದಿದ್ದಾರೆ.

ಕೋಝಿಕ್ಕೋಡ್ | ಇ.ಕೆ.ವಿಭಾಗ ಸಮಸ್ತ ಅಧ್ಯಕ್ಷರಾದ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಅವರನ್ನು ಟೀಕಿಸಿ ಭಾಷಣಮಾಡಿರುವ ಇಕೆ ವಿಭಾಗ ಮುಶಾವರ ಸದಸ್ಯ ಮುಸ್ತಫಲ್ ಫೈಝಿ ಅವರನ್ನು ಸಮಸ್ತದಿಂದ ಅಮಾನತುಗೊಳಿಸಲಾಗಿದೆ. ಜಿಫ್ರಿ ಮುತ್ತುಕೋಯ ತಂಙಳ್ ವಿರುದ್ಧ ಎತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇಂದು ಕೋಝಿಕ್ಕೋಡ್‌ನಲ್ಲಿ ನಡೆದ ಮುಶಾವರ ಸಭೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನಿನ್ನೆ ಮಲಪ್ಪುರಂನಲ್ಲಿ ಇ.ಕೆ. ವಿಭಾಗದ ಲೀಗ್ ಪರ ಸಂಘಟನೆಯಾದ ಎಸ್‌ಎಂಎಫ್ ಆಯೋಜಿಸಿದ್ದ ಪುನರುಜ್ಜಿವನ ಸಮ್ಮೇಳನದಲ್ಲಿ ಮುಸ್ತಫಲ್ ಫೈಝಿ ಅವರು ಜೆಫ್ರಿ ತಂಙಳ್ ಮತ್ತು ತಾನು ಸದಸ್ಯನಾಗಿರುವ ಮುಶಾವರವನ್ನು ಟೀಕಿಸಿ ಭಾಷಣ ಮಾಡಿದ್ದರು. ಅಧ್ಯಕ್ಷರಾದ ಜಿಫ್ರಿ ತಂಙಳ್ ಅವರನ್ನು ಪರೋಕ್ಷವಾಗಿ ಟೀಕಿಸಿದ ಮುಸ್ತಫ ಫೈಝಿ ಅವರು, ತಡವಾಗಿ ವಾಹನ ಹತ್ತಿದವರಲ್ಲ ದಿಕ್ಕನ್ನು ನಿರ್ಧರಿಸಬೇಕಾದ್ದು ಹೊರತು, ಮೊದಲು ವಾಹನ ಹತ್ತಿದವರು ಹೇಳುವ ಕಡೆ ವಾಹನವನ್ನು ತಿರುಗಿಸಬೇಕು ಎಂದಿದ್ದಾರೆ.

ನಂತರ ಮುಂದುವರಿದು, ಇ.ಕೆ. ಸಮಸ್ತ ಮುಸ್ಲಿಂಲೀಗ್ ಅನ್ನು ಬೆಂಬಲಿಸದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇಕೆ ಸಮಸ್ತದ ಒಂದು ವಿಭಾಗವು ಇದರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.

ಇದಲ್ಲದೆ, ಜಿಫ್ರಿ ತಂಙಳ್ ತಬ್ಲೀಗ್ ಕಾರ್ಯಕರ್ತನ ಮೇಲೆ ಜನಾಝ ನಮಾಜ್ ನಿರ್ವಹಿಸಿದರು ಮತ್ತು ಮಹಿಳಾ ಪತ್ರಕರ್ತೆಯೊಬ್ಬರಿಗೆ ಸಂದರ್ಶನ ನೀಡಲು ಅನುಮತಿ ನೀಡಿದರು ಎಂದು ಮುಸ್ತಫಲ್ ಫೈಝಿ ವಾಟ್ಸಾಪ್ ಗುಂಪಿನ ಮೂಲಕ ಆರೋಪಗಳನ್ನು ಹರಡಿದ್ದರು.

ಬಡ್ಡಿ ವ್ಯವಹಾರಗಳಿಗೆ ಸಂಬಂಧಿಸಿದ ಸುಳ್ಳು ಹೇಳಿಕೆಗಳನ್ನು ಹೊಂದಿರುವ ಪುಸ್ತಕವನ್ನು ಪ್ರಕಟಿಸಿದ್ದಕ್ಕಾಗಿ ಮುಸ್ತಫಲ್ ಫೈಝಿ ಈ ಹಿಂದೆಯೂ ಕ್ರಮಕ್ಕೆ ಒಳಗಾಗಿದ್ದರು.