janadhvani

Kannada Online News Paper

ವಿಮಾನ ನಿಲ್ದಾಣದಲ್ಲಿ ಲಗೇಜ್ ತೂಕ ಮಾಡಿದಾಗ, ಎರಡು ಸ್ಥಳಗಳಲ್ಲಿ ಎರಡು ತೂಕಗಳು- ಪೋಸ್ಟ್ ವೈರಲ್

ವಿಮಾನ ನಿಲ್ದಾಣದಲ್ಲಿ ಲಗೇಜುಗಳನ್ನು ತೂಗುವ ಮತ್ತು ಲೆಕ್ಕಾಚಾರ ಮಾಡುವ ಸಂಪೂರ್ಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಯುವಕನ ಪೋಸ್ಟ್ ಪ್ರಶ್ನಿಸುತ್ತದೆ

ಚಂಡೀಗಢ: ವಿಮಾನ ಪ್ರಯಾಣಿಕರಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್ ಕಳೆದ ಕೆಲವು ದಿನಗಳಿಂದ ಸೈಬರ್ ಜಗತ್ತಿನಲ್ಲಿ ಪ್ರಮುಖ ಚರ್ಚೆಯ ವಿಷಯಗಳಲ್ಲಿ ಒಂದಾಗಿದೆ. ಚಂಡೀಗಢದಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ವಿಮಾನ ನಿಲ್ದಾಣದಲ್ಲಾದ ತನ್ನ ಅನುಭವವನ್ನು ವಿವರಿಸುತ್ತಾ, ತಮ್ಮ ಲಗೇಜನ್ನು ತೂಗಿದಾಗ, ಎರಡು ಕೌಂಟರ್‌ಗಳಲ್ಲಿನ ರೀಡಿಂಗ್ ಗಳಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ ಎಂಬ ಸಂದೇಶದೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಲಗೇಜುಗಳನ್ನು ತೂಗುವ ಮತ್ತು ಲೆಕ್ಕಾಚಾರ ಮಾಡುವ ಸಂಪೂರ್ಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಯುವಕನ ಪೋಸ್ಟ್ ಪ್ರಶ್ನಿಸುತ್ತದೆ. ನಾನು ವಿಮಾನ ನಿಲ್ದಾಣಕ್ಕೆ ಬಂದು ಇಂಡಿಗೋ ಕೌಂಟರ್‌ನಲ್ಲಿ ನನ್ನ ಲಗೇಜನ್ನು ತೂಗಿದಾಗ, ಆರಂಭಿಕ ತೂಕ 14.5 ಕಿಲೋಗ್ರಾಂಗಳಷ್ಟಿತ್ತು. ಆದರೆ ತನ್ನ ಬ್ಯಾಗ್ ಅಷ್ಟು ಭಾರವಾಗಿಲ್ಲ ಎಂದು ಭಾವಿಸಿದ ಪ್ರಯಾಣಿಕನು ಕೌಂಟರ್‌ನಲ್ಲಿದ್ದ ಸಿಬ್ಬಂದಿಗೆ ತನ್ನ ಅನುಮಾನಗಳನ್ನು ವ್ಯಕ್ತಪಡಿಸಿದಾಗ, ಸಿಬ್ಬಂದಿ ಬೇರೆ ಬೆಲ್ಟ್ ಅನ್ನು ಪರಿಶೀಲಿಸಬಹುದು ಎಂದು ಹೇಳಿದರು. ಅಲ್ಲಿ ಪರಿಶೀಲಿಸಿದಾಗ, ತೂಕ 12.2 ಕಿಲೋಗ್ರಾಂಗಳಷ್ಟಿತ್ತು. ಇದು ಅನುಮಾನವನ್ನು ದ್ವಿಗುಣಗೊಳಿಸಿತು.

ಜನವರಿ 30 ರಂದು ಸಂಜೆ 4 ಗಂಟೆ ಸುಮಾರಿಗೆ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ನಾನು ಎರಡು ಯಂತ್ರಗಳ ತೂಕವನ್ನು ನೋಡಿದಾಗ, ಸುಮಾರು 2.3 ಕಿಲೋಗ್ರಾಂಗಳಷ್ಟು ವ್ಯತ್ಯಾಸವನ್ನು ಕಂಡೆ. ಅಷ್ಟು ಸುಲಭವಾಗಿ ಹಾಲಾಗುವ ಯಂತ್ರವೇ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು ಮತ್ತು ಇದು ಅಪರೂಪದ ಘಟನೆ ಮತ್ತು ಕೇವಲ ತಾಂತ್ರಿಕ ದೋಷವಾಗಿರಲಿ ಎಂದು ಆಶಿಸಿದ್ದಾರೆ.

ಆದರೆ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಲಗೇಜ್ ತೂಕ ಹೆಚ್ಚಾದರೆ ವಿಮಾನಯಾನ ಸಂಸ್ಥೆಯು ಹಣ ವಿಧಿಸುವುದರಿಂದ, ಇದರಲ್ಲಿ ವಂಚನೆ ಇರಬಹುದು ಎಂದು ಹಲವರು ನಂಬುತ್ತಾರೆ. ಇದೇ ರೀತಿಯ ಅನುಭವಗಳನ್ನು ಹೊಂದಿದ್ದೇವೆ ಎಂದು ಹೇಳುವ ಮೂಲಕ ಹಲವು ಅನಿವಾಸಿಗಲು ಮುಂದೆ ಬಂದಿದ್ದಾರೆ. ಸಂಪರ್ಕ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹಲವು ವಿಮಾನ ನಿಲ್ದಾಣಗಳಲ್ಲಿ ತನ್ನ ಬ್ಯಾಗಿನ ತೂಕ ವ್ಯತ್ಯಾಸ ಕಂಡು ಬಂದ ಅನುಭವವನ್ನು ಒಬ್ಬರು ಹಂಚಿದ್ದಾರೆ. ಲಗೇಜಿಗೆ ಏನನ್ನೂ ಹಚ್ಚಾಗಿ ಹಾಕದೆ ಅಥವಾ ಲಗೇಜಿನಿಂದ ಏನನ್ನೂ ತೆಗೆಯದೆ 12 ಕೆಜಿ ವ್ಯತ್ಯಾಸವನ್ನು ಕಂಡದ್ದನ್ನು ಅವರು ವಿವರಿಸುತ್ತಾರೆ.

ಏತನ್ಮಧ್ಯೆ, ಇಂಡಿಗೊ ಕೂಡ ಪ್ರಸ್ತುತ ವಿವಾದಗಳಿಗೆ ವಿವರಣೆಯನ್ನು ನೀಡಿದೆ. ತೂಕದ ಉಪಕರಣಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ವಿಮಾನ ನಿಲ್ದಾಣದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸುತ್ತಾರೆ ಎಂದು ಕಂಪನಿ ಹೇಳುತ್ತದೆ. ಈ ಘಟನೆಯಲ್ಲಿ ಮಾಹಿತಿಯನ್ನು ಸಂಬಂಧಿತ ಇಲಾಖೆಗೆ ರವಾನಿಸಲಾಗಿದೆ ಮತ್ತು ಅವರು ತನಿಖೆ ನಡೆಸುತ್ತಾರೆ ಎಂದು ಇಂಡಿಗೋದ ಪ್ರತಿಕ್ರಿಯೆಯು ವಿವರಿಸಿದೆ.

error: Content is protected !! Not allowed copy content from janadhvani.com