SჄS ಕಿನ್ಯ,ಕುರಿಯ ಯುನಿಟ್ ನ ಮಹಾಸಭೆಯು ಕುರಿಯ ಸುನ್ನೀ ಸೆಂಟರ್ ನಲ್ಲಿ ಮುಸ್ಲಿಂ ಜಮಾಅತ್ ಕುರಿಯ ಅಧ್ಯಕ್ಷ ಆಲಿ ಕುಂಞಿ ಬಾಕಿಮಾರ್ ರವರ ಅಧ್ಯಕ್ಷತೆಯಲ್ಲಿ SჄS ಕಿನ್ಯ ಸರ್ಕಲ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿದರು.
ಸರ್ಕಲ್ ನಿಂದ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಅಯ್ಯೂಬ್ ಬೆಳರಿಂಗೆ ಹಾಗೂ ಸಾಮಣಿಗೆ ಅಬ್ದುಲ್ ಮಜೀದ್ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಎನ್.ಕೆ ರಹೀಂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಬಷೀರ್ ರಹ್ಮತ್ ನಗರ ಕೋಶಾಧಿಕಾರಿಯಾಗಿ ಹನೀಫ್ ಜೆ.ಕೆ ರವರನ್ನು ಆಯ್ಕೆ ಮಾಡಲಾಯಿತು.
ಮುಸ್ತಫಾ (ಉಪಾಧ್ಯಕ್ಷರು) ಮುಹಮ್ಮದ್ ರಫೀಖ್ ಝುಹ್ರಿ (ದಅ್‌ವಾ ಕಾರ್ಯದರ್ಶಿ) ರಿಯಾಝ್ ಆರ್.ಎನ್ (ಸಾಂತ್ವನ & ಇಸಾಬ ಕಾರ್ಯದರ್ಶಿ) ಕಾರ್ಯಕಾರಿ ಸಮಿತಿಗೆ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ,ಅಬ್ದುಸ್ಸಲಾಂ ಬಾಕಿಮಾರ್,ಬಷೀರ್ ಲತೀಫಿ,ಇಲ್ಯಾಸ್ ಡಿ.ಕೆ,ಕುಂಞಿಮೋನು ಡಿ.ಕೆ,ಅನ್ವರ್ ಕಜೆ,ಇಸ್ಮಾಈಲ್ ರವರನ್ನು ಸದಸ್ಯರು ಗಳಾಗಿ ಆರಿಸಲಾಗಿದೆ.
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್,ಕೋಶಾಧಿಕಾರಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕುರಿಯ ಮುಸ್ಲಿಂ ಜಮಾಅತ್ ನಾಯಕ ಎನ್.ಕೆ ಅಬ್ದುಲ್ ಹಮೀದ್,SჄS ಕಿನ್ಯ ಸರ್ಕಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಬಾಕಿಮಾರ್ ಇನ್ನಿತರ ನಾಯಕರು ಉಪಸ್ಥಿತರಿದ್ದರು.
SჄS ಕುರಿಯ ಯುನಿಟ್ ನ ನಿಕಟಪೂರ್ವ ಕಾರ್ಯದರ್ಶಿ ಇಲ್ಯಾಸ್ ಡಿ.ಕೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.