janadhvani

Kannada Online News Paper

ರಿಯಾದ್‌ ನಲ್ಲಿ ಸಾಮಾಜಿಕ ಕಾರ್ಯಕರ್ತನ ಇರಿದು ಹತ್ಯೆ- ಕಳ್ಳರ ದಾಳಿ ಶಂಕೆ

ಸೌದಿ ಅರೇಬಿಯಾದ ಶರಾ ರೈಲು, ಶುಮೈಸಿ ಮತ್ತು ಮನ್ಸೂರಿಯಾದ ಕೆಲವು ಭಾಗಗಳಲ್ಲಿ ಕಳ್ಳರ ಇರುವುದಾಗಿ ಹೇಳಲಾಗಿದೆ

ರಿಯಾದ್: ಸೌದಿ ಅರೇಬಿಯಾದ ರಿಯಾದ್‌ನ ಶುಮೈಸಿಯಲ್ಲಿ ಮಲಯಾಳಿಯೊಬ್ಬರನ್ನು ಇರಿದು ಹತ್ಯೆ ಮಾಡಲಾಗಿದೆ. ಎರ್ನಾಕುಲಂ ಮುವಾಟ್ಟುಪುಝ ಮೂಲದ ಶಮೀರ್ ಅಲಿಯಾರ್ ಮೃತರು. ಅವರಿಗೆ 47 ವರ್ಷ ವಯಸ್ಸಾಗಿತ್ತು. ವಾಹನ, ಫೋನ್, ಲ್ಯಾಪ್‌ಟಾಪ್, ಹಣ ಎಲ್ಲವೂ ನಷ್ಟವಾಗಿದೆ. ಕಳ್ಳರ ದಾಳಿಯ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಭಾನುವಾರ ಸಂಜೆಯಿಂದ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ನಾಪತ್ತೆಯಾಗಿರುವುದಾಗಿ ಪೋಲೀಸರಿಗೆ ದೂರು ನೀಡಲಾಗಿತ್ತು. ಕೆಲಸ ಮುಗಿಸಿ ತನ್ನ ಕೋಣೆಗೆ ಮರಳಿದ ಶಮೀರ್ ನ ಯಾವುದೇ ಮಾಹಿತಿ ಇಲ್ಲದ ಕಾರಣ ಅವರ ಸ್ನೇಹಿತರು ಅವರನ್ನು ಹುಡುಕಿ ಬಂದಿದ್ದಾರೆ. ಅವರು ತಂಗಿದ್ದ ಕೊಠಡಿಯಲ್ಲಿ ಇರಿದು ಹತ್ಯೆ ಮಾಡಿದ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಳ್ಳರು ಇರಿದು ಕೊಲೆ ಮಾಡಿರಬಹು ಎಂದು ಸ್ನೇಹಿತರು ಶಂಕಿಸಿದ್ದಾರೆ. ಅವರ ಹೆಸರಿನಲ್ಲಿ ಶುಮೈಸಿಯಲ್ಲಿ ಎರಡು ಫ್ಲಾಟ್‌ಗಳಿವೆ. ಅವುಗಳಲ್ಲಿ ಒಂದರಲ್ಲಿ ಮೃತದೇಹ ಪತ್ತೆಯಾಗಿದೆ.ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೀರ್ಘಕಾಲದಿಂದ ರಿಯಾದಿನಲ್ಲಿರುವ ಶಮೀರ್ ಮೊಬೈಲ್ ಅಂಗಡಿ, ವ್ಯಾಪಾರ ಸೇರಿದಂತೆ ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದರು. ಕೆಎಂಸಿಸಿ ಎರ್ನಾಕುಲಂ ಕಾರ್ಯಕಾರಿ ಸದಸ್ಯರಾಗಿದ್ದ ಅವರು, ಕೆಎಂಸಿಸಿ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ಮೃತದೇಹವನ್ನು ರಿಯಾದ್ ಶುಮೈಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. ಅವರ ಪತ್ನಿ ಶುಮೈಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಮೂವರು ಮಕ್ಕಳಿದ್ದಾರೆ. ಸಮಾಜ ಸೇವಕ ಸಿದ್ದಿಕ್ ತುವ್ವೂರು ಅವರ ನೇತೃತ್ವದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಸೌದಿ ಅರೇಬಿಯಾದ ಶರಾ ರೈಲು, ಶುಮೈಸಿ ಮತ್ತು ಮನ್ಸೂರಿಯಾದ ಕೆಲವು ಭಾಗಗಳಲ್ಲಿ ಕಳ್ಳರ ಹಾವಳಿ ಇರುವುದಾಗಿ ಹೇಳಲಾಗಿದೆ. ರಾತ್ರಿ ವೇಳೆಗಳಲ್ಲಿ ಟ್ಯಾಕ್ಸಿ ಚಲಾಯಿಸುವವರು, ಏಕಾಂಗಿಯಾಗಿ ವಾಹನ ಚಲಾಯಿಸುವವರು ಕಳ್ಳರ ಹಾವಳಿ ಇರುವಂತಹಾ ಪ್ರದೇಶಗಳಿಗೆ ತೆರಳದಂತೆ ಸಲಹೆ ನೀಡಲಾಗಿದೆ.

ವಾಹನವನ್ನು ಪಾರ್ಕ್ ಮಾಡುವ ಸಂದರ್ಭಗಳಲ್ಲಿ, ತಮ್ಮ ವಾಸಸ್ಥಳಕ್ಕೆ ಪ್ರವೇಶಿಸುವ ವೇಳೆಗಳಲ್ಲಿ ತಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಗಮನಿಸುವಂತೆ ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com