ಸೌದಿ ಅರೇಬಿಯಾ : ಕೆ.ಸಿ.ಎಫ್ ಅಲ್ ಗಸೀಂ ಝೋನ್ ಬುರೈದಾ ಸೆಕ್ಟರ್ ಹಾಗೂ ಉನೈಝಾ ಸೆಕ್ಟರ್ ಜಂಟಿಯಾಗಿ ದಿನಾಂಕ 24/01/2025 ರಂದು ಬುರೈದಾ ಇಸ್ತಿರಾಹದಲ್ಲಿ ಅಯೋಜಿಸಿದ ನೂತನ ಪಧಾಧಿಕಾರಿಗಳ ವೆಲ್ಕಂ ಬೋರ್ಡ್ ಕಾರ್ಯಕ್ರಮ ಯಶಸ್ವಿಯಾಯಿತು.

ಕೆ.ಸಿ.ಎಫ್ ಅಲ್ ಗಸೀಂ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಅಬ್ದುಲ್ ಖಯ್ಯೂಂ ಉಸ್ತಾದರು ದುಆ ನೇತೃತ್ವವನ್ನು ನೀಡಿದರು.
ಅಲ್ ಗಸೀಂ ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿಯಾದ ಇಕ್ಬಾಲ್ ಪಾನೇಲ ಸ್ವಾಗತ ಭಾಷಣ ಮಾಡಿದರು.ಝೋನ್ ಸಂಘಟನಾ ಇಲಾಖೆ ಅಧ್ಯಕ್ಷರಾದ ಮುಸ್ತಫಾ ಲತೀಫಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಬುರೈದಾ ಸೆಕ್ಟರ್ ಅಧ್ಯಕ್ಷರಾದ ಶುಕೂರು ಪಕ್ಕಲಡ್ಕ ಉದ್ಘಾಟಿಸಿದರು . ಕೆ.ಸಿ.ಎಫ್ ಅಲ್ ಗಸೀಂ ಝೋನ್ ಅಧ್ಯಕ್ಷರಾದ ಅಬ್ದುಲ್ ಕರೀಂ ಇಮ್ದಾದಿ ಉಸ್ತಾದರು ನೂತನ ಪಧಾಧಿಕಾರಿಗಳನ್ನು ವೆಲ್ಕಂ ಮಾಡಿ ಸಂಘಟನಾ ತರಗತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಬರೈದಾ ಸೆಕ್ಟರ್ ಹಾಗೂ ಉನೈಝಾ ಸೆಕ್ಟರ್ ಇದರ ಹಲವಾರು
ನೂತನ ಪಧಾದಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಉನೈಝಾ ಸೆಕ್ಟರ್ ಅಧ್ಯಕ್ಷರಾದ ಮುಹಿಯದ್ದೀನ್ ಶಿವಮೊಗ್ಗ ವಂದಿಸಿದರು.
ವರದಿ : ಆಸೀಫ್ ಅಜಿಲಮೊಗರು.
(ಕೆ.ಸಿ.ಎಫ್ ಉನೈಝಾ ಸೆಕ್ಟರ್ ಎಡ್ಮಿನ್ ಇಲಾಖೆ ಅಧ್ಯಕ್ಷರು.)