janadhvani

Kannada Online News Paper

ಕುದ್ರೋಳಿ ಮಖಾಂ ಉರೂಸ್ ಅದ್ದೂರಿ ಚಾಲನೆ

ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಜನವರಿ 31 ರಂದು ಇಶಾ ನಮಾಝ್ ಬಳಿಕ ದರ್ಗಾ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷತೆಯಲ್ಲಿ ಬೃಹತ್ ಮೌಲಿದ್ ಹಾಗೂ ರಿಫಾಯಿ ರಾತೀಬ್ ಮಜ್ಲಿಸ್ ನೊಂದಿಗೆ ಆರಂಭಗೊಂಡಿತು.


ಪ್ರಸ್ತುತ ಮಜ್ಲಿಸ್ ನಲ್ಲಿ ಮೊಹ್ದಿನ್ ಪಳ್ಳಿ ಖತೀಬ್ ಕೆಕೆ ಮುಹಮ್ಮದ್ ಬಾಖವಿ, ಕಂಡತ್ ಪಳ್ಳಿ ಖತೀಬ್ ಪಿ ಎ ಮುಹಮ್ಮದ್ ರಫೀಕ್ ಮದನಿ ಕಾಮಿಲ್ ಸಖಾಫಿ, ನಡುಪಳ್ಳಿ ಸದರ್ ಅಲಿ ಫೈಝಿ, ಮುಅದ್ದಿನ್ ಸಿರಾಜ್ ಪೈಝಿ , ಅಶ್ರೀಫ್ ಸಅದಿ ಅಲ್ ಮಲ್ಹರಿ, ನಡುಪಳ್ಳಿ ಮಸೀದಿ ಅಧ್ಯಾಪಕರು,ದರ್ಗಾ ಸಮಿತಿ ಸದಸ್ಯರು, ನಡುಪಳ್ಳಿ ಜಮಾಅತ್ ಬಾಂದವರು‌‌ ಭಾಗವಹಿಸಿದ್ದರು.

ರಿಫಾಯಿ ರಾತೀಬ್ ನೇತೃತ್ವ ವವನ್ನು ಸಯ್ಯಿದ್ ಹಾಶಿಂ ಆಟ್ಟಕ್ಕೋಯಾ ತಂಙಳ್ ನಿಲಾಮಿಯ್ಯಿ ಕವರತ್ತಿ ಲಕ್ಷದೀಪ ವಹಿಸಿ ದುಆ ನೆರವೇರಿಸಿದರು.
ಮಗ್ರಿಬ್ ನಮಾಝ್ ಸಂದರ್ಭದಲ್ಲಿ ಬಂದರ್ ಮೌಲಾ ತಂಡದಿಂದ ಚಾದರ ಅರ್ಪಿಸಿ ಪ್ರಾರ್ಥನೆ ನಡೆಸಲಾಯಿತು.

error: Content is protected !! Not allowed copy content from janadhvani.com