ಆಲಪ್ಪುಝ | ಪುರುಷ ಮತ್ತು ಮಹಿಳೆ ಮಿಶ್ರಿತ ಕಾರ್ಯಕ್ರಮಗಳು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ ಎಂಬುದು 40 ಸದಸ್ಯರ ಸಮಸ್ತ ಮುಶಾವರ (ಸಮಾಲೋಚನಾ ಸಮಿತಿ) ನಿರ್ಣಯವಾಗಿದೆ. ಅದನ್ನು ಪ್ರಸ್ತುತ ನಡೆಯುತ್ತಿರುವ ವ್ಯಾಯಾಮದ ಹೆಸರಿನಲ್ಲಿ ತನ್ನದೇ ಹೇಳಿಕೆ ಎಂಬಂತೆ ಬಿಂಬಿಸುತ್ತಿರುವುದು ದುರುದ್ದೇಶದಿಂದ ಕೂಡಿದೆ ಎಂದು ಸಮಸ್ತ ಪ್ರಧಾನ ಕಾರ್ಯದರ್ಶಿ ಹಾಗೂ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ಲಜ್ನತ್ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿದ್ದ ಡಾ. ಎಂ.ಎಂ.ಹನೀಫ್ ಮೌಲವಿ ಸಂಸ್ಮರಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಇಸ್ಲಾಮಿನ ನಿಯಮಗಳನ್ನು ನಿರ್ದೇಶಿಸುವ ಹಕ್ಕು ವಿದ್ವಾಂಸರಿಗಾಗಿದೆ. ಅದನ್ನು ಅವರಿಗೇ ಬಿಟ್ಟು ಕೊಡಬೇಕು. ಮಹಿಳೆಯರ ಪರ ವಕಾಲತ್ತು ವಹಿಸುವ ರಾಜಕೀಯ ಪಕ್ಷಗಳಲ್ಲಿಯೂ ಅಧಿಕಾರವನ್ನು ಪುರುಷರೇ ವಹಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರ ಸಮಿತಿಗಳ ಪಟ್ಟಿಯನ್ನು ನೋಡಿದರೂ ಇದು ಸ್ಪಷ್ಟವಾಗುತ್ತದೆ. ಪ್ರಯಾಣಿಕರ ವಾಹನಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ, ಅದು ಅಗತ್ಯವೂ ಕೂಡ . ಮಹಿಳೆಯರನ್ನು ದಮನಿಸಲು ಅಥವಾ ಕೀಳಾಗಿ ಕಾಣಲು ಇಸ್ಲಾಂ ಸಿದ್ಧವಿಲ್ಲ. ಇಸ್ಲಾಂ ಮಹಿಳೆಯರಿಗೆ ಆಸ್ತಿ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೀಡಿದೆ.
ಇಸ್ಲಾಮ್ ಜಗತ್ತಿನಲ್ಲಿ ಹರಡಿದ್ದು ದಬ್ಬಾಳಿಕೆ ಅಥವಾ ಬೆದರಿಕೆಯಿಂದಲ್ಲ. ಪ್ರವಾದಿ ಮತ್ತು ಅವರ ಸಂಗಡಿಗರು ಉತ್ತಮ ಸ್ವಭಾವ ಮತ್ತು ನಮ್ರತೆಯಿಂದ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಿದರು ಮತ್ತು ಅದನ್ನು ಮುಸ್ಲಿಮರು ಮುಂದುವರಿಸುತ್ತಾರೆ ಎಂದು ಕಾಂತಪುರಂ ಹೇಳಿದರು.
ಸಮಸ್ತ ಕೇಂದ್ರದ ಮುಶಾವರ ಸದಸ್ಯ ಎ ತ್ವಾಹಾ ಮುಸ್ಲಿಯಾರ್ ಕಾಯಂಕುಳಂ ಅನುಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇರಳ ಮುಸ್ಲಿಂ ಜಮಾಅತ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಸಯ್ಯಿದ್ ಹೆಚ್ ಅಬ್ದುನಾಸರ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಡಾ. ಪಿಎ ಮುಹಮ್ಮದ್ ಕುಂಞ ಸಖಾಫಿ ಮುಖ್ಯ ಪ್ರಭಾಷಣಗೈದರು.
ರಾಜ್ಯ ಮಾಹಿತಿ ಆಯುಕ್ತ ಡಾ. ಎ.ಎ.ಹಕೀಂ, ಮಾಜಿ ಸಂಸದ. ಎ.ಎಂ.ಆರಿಫ್, ಮಾಜಿ ಶಾಸಕ ಎ.ಎ.ಶುಕೂರ್, ಪಿ.ಕೆ.ಮಹಮ್ಮದ್ ಬಾದುಶಾ ಸಖಾಫಿ, ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯ ಪಿ.ಎ.ಹೈದ್ರೋಸ್ ಹಾಜಿ, ಲಜ್ನತುಲ್ ಮುಹಮ್ಮದಿಯಾ ಅಧ್ಯಕ್ಷ ಎ.ಎಂ.ನಝೀರ್ ಮಾತನಾಡಿದರು.