ಕುಟ್ಯಾಡಿ: ಲಹರಿ ಕಾರಣದಿಂದಾಗಿ ಕೊಲೆಗಳು ಹೆಚ್ಚುತ್ತಿದ್ದು, ಹೊಸ ತಲೆಮಾರಿನವರು ತಮ್ಮ ತಂದೆ-ತಾಯಿಯನ್ನೇ ಕೊಲ್ಲುವ ಹವಣಿಕೆಗೆ ಮುಂದಾಗುತ್ತಿರುವುದು ಸಾಮಾಜಿಕವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ಕುಟ್ಯಾಡಿ ಸಿರಾಜುಲ್ ಹುದಾದಲ್ಲಿ ಜ. 20 ರಂದು ನಡೆದ ಹಫ್ಳತುಲ್ ಖುರ್ಆನ್ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾನೂನಿನಲ್ಲಿರುವ ಲೋಪದೋಷಗಳನ್ನು ಬಳಸಿಕೊಂಡು ಅಪರಾಧಿಗಳು ಪಾರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆ ವಿರುದ್ಧವಾಗಿ ಸರ್ಕಾರಗಳು ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಹೊಸ ಪೀಳಿಗೆಯೇ ಲಹರಿಯ ಮುಖ್ಯ ಗ್ರಾಹಕರಾಗಿದ್ದಾರೆ. ಇದರ ಲಭ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಾದರೆ ಮಾತ್ರ ಈ ಪೀಳಿಗೆಯನ್ನು ರಕ್ಷಿಸಲು ಸಾಧ್ಯ. ಲಹರಿ ವಿರುದ್ಧ ವಿದ್ಯಾರ್ಥಿ-ಯುವ ಸಮೂಹ ಮತ್ತು ಸಾರ್ವಜನಿಕ ಸಮಾಜ ಒಟ್ಟಾಗಿ ನಿಲ್ಲಬೇಕೆಂದು ಅವರು ಒತ್ತಾಯಿಸಿದರು.
ಸಾಮಾಜಿಕ ದುಷ್ಕೃತ್ಯಗಳನ್ನು ವಿರೋಧಿಸುವ ವಿದ್ವಾಂಸರನ್ನು ಹಳಬರು ಎಂದು ಮುದ್ರೆಯೊತ್ತಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಪೂರ್ಣ ತಿಳುವಳಿಕೆಯೊಂದಿಗೆ ನಾವು ಗಂಡು-ಹೆಣ್ಣಿನ ಬೆರೆಯುವಿಕೆಯನ್ನು ವಿರೋಧಿಸುತ್ತೇವೆ. ಅಂತಹವುಗಳನ್ನು ವಿರೋಧಿಸುವುನ್ನು ಮುಂದುವರಿಸಲಾಗುವುದು ಎಂದು ಅವರು ನೆನಪಿಸಿದರು.
ವಿಶ್ವಾಸಿಗಳಿಗೂ ಅಲ್ಲದವರಿಗೂ ಏಕಕಾಲಕ್ಕೆ ಸ್ವೀಕಾರಾರ್ಹವಾದ ಉತ್ತಮ ಕಾರ್ಯಗಳನ್ನೇ ಖುರ್ಆನ್ ಕಲಿಸುತ್ತದೆ. ಲಹರಿ ಸೇರಿದಂತೆ ಸಾಮಾಜಿಕ ಪಿಡುಗುಗಳನ್ನು ತಡೆಯುವಲ್ಲಿ ಖುರ್‌ಆ ನ್ ನ ಕರೆ ಗಮನಾರ್ಹವಾಗಿದೆ ಎಂದು ಅವರು ಎಚ್ಚರಿಸಿದರು.
ಸಿರಾಜುಲ್ ಹುದಾ ಕ್ಯಾಂಪಸ್ ನಲ್ಲಿ ನಡೆದ ಹಫ್ಳತುಲ್ ಖುರ್ಆನ್ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಅಲಿ ಬಾಫಕಿ ತಂಙಳ್ ಪ್ರಾರ್ಥನೆ ನಡೆಸಿದರು. ಎಸ್ ವೈಎಸ್ ರಾಜ್ಯಾಧ್ಯಕ್ಷ ಹಾಗೂ ಸಿರಾಜುಲ್ ಹುದಾ ಉಪಾಧ್ಯಕ್ಷ ಸಯ್ಯಿದ್ ತ್ವಾಹ ತಂಞಳ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಅಧ್ಯಕ್ಷ ಇ ಸುಲೈಮಾನ್ ಮುಸ್ಲಿಯಾರ್ ಮತ್ತು ಸಮಸ್ತ ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಸಭಿಕರನ್ನುದ್ದೇಶಿಸಿ ಮಾತನಾಡಿದರು. ವಿ. ಪಿ. ಎಂ ಫೈಝಿ ವಿಲ್ಯಾಪಳ್ಳಿ, ಮುತ್ತಲಿಬ್ ಸಖಾಫಿ ಪಾರಾಡ್, ಇಬ್ರಾಹಿಂ ಸಖಾಫಿ ಕುಮ್ಮೋಳಿ, ಬಶೀರ್ ಅಝ್ಹರಿ ಪೇರೋಡ್, ಫಿರ್ದೌಸ್ ಸುರೈಜಿ ಮೊದಲಾದವರು ಮಾತನಾಡಿದರು. ರಾಶಿದ್ ಬುಖಾರಿ ಇರಿಙನ್ನೂರು ಸ್ವಾಗತಿಸಿ, ಹುಸೈನ್ ಮಾಸ್ಟರ್ ಕುನ್ನತ್ತ್ ಧನ್ಯವಾದಗೈದರು.