ಮಕ್ಕಾ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮತ್ತು ಅದರ ಕಾರ್ಯಕರ್ತರ ನಿತ್ಯ ಕನಸಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಛೇರಿ ಮತ್ತು ಕಚೇರಿ ಸಂಕೀರ್ಣಗಳ ಉದ್ಘಾಟನೆಯ ಅಂಗವಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿಕೃತ ವಿದೇಶಿ ಸಂಸ್ಥೆಯಾದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ (ಐಒಸಿ) ಮಕ್ಕಾ ಸೆಂಟ್ರಲ್ ಕಮಿಟಿಯು ಅದ್ಧೂರಿ ಕಾರ್ಯಕ್ರಮ ಹಾಗೂ ಪಾಯಸ ವಿತರಣೆಯನ್ನು ನಡೆಸಿತು.
ಮಕ್ಕಾ ಅಝೀಝಿಯಾದಲ್ಲಿ ನಡೆದ ಕಾರ್ಯಕ್ರಮವನ್ನು ಐಒಸಿ ನಾಯಕ ಶಾನಿ ಯಾಸ್ ಕುನ್ನಿಕೋಡ್ ಉದ್ಘಾಟಿಸಿದರು. ಮಕ್ಕಾ ಕೇಂದ್ರ ಸಮಿತಿ ಅಧ್ಯಕ್ಷ ಶಾಜಿ ಚುನಕ್ಕರ ಅಧ್ಯಕ್ಷತೆ ವಹಿಸಿದ್ದರು.
ಐಒಸಿ ಮುಖಂಡರಾದ ಹ್ಯಾರಿಸ್ ಮನ್ನಾರ್ಕಾಡ್, ನಿಸಾಮ್ ಕಾಯಂಕುಲಂ, ಇಕ್ಬಾಲ್ ಗಬ್ಗಲ್, ಶಮ್ನಾಝ್ ಮೀರಾನ್ ಮೈಲೂರು, ರಫೀಕ್ ವರಂತರಪಿಳ್ಳಿ, ಅಬ್ದುಲ್ ಸಲಾಂ ಅಡಿವಾಡ್, ಮುಹಮ್ಮದ್ ಸದ್ದಾಂ ಹುಸೇನ್, ರಫೀಕ್ ಕೋದಮಂಗಲಂ ಮುಂತಾದವರು ಶುಭ ಹಾರೈಸಿದರು.
ಪಾಯಸ ವಿತರಣೆಗೆ ಕೇಂದ್ರ ಸಮಿತಿ ಪದಾಧಿಕಾರಿಗಳಾದ ಸರ್ಫರಾಝ್ ತಲಶ್ಶೇರಿ, ಶರಫುದ್ದೀನ್ ಪುಝಿತ್ತನತ್ತ್, ಮೊಹಮ್ಮದ್ ಸರ್ವರ್ ಖಾನ್, ನವಾಝ್ ಕುನ್ನಿಕೋಡ್ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನೌಶಾದ್ ತೊಡುಪುಝ ಸ್ವಾಗತಿಸಿ, ಕೋಶಾಧಿಕಾರಿ ಇಬ್ರಾಹಿಂ ಕನ್ನಂಗಾರ್ ವಂದಿಸಿದರು.