janadhvani

Kannada Online News Paper

ಸೌದಿ: ಒಂದೇ ವಾರದಲ್ಲಿ 12 ಸಾವಿರ ವಲಸಿಗರ ಗಡೀಪಾರು- 21 ಸಾವಿರ ವಲಸಿಗರ ಬಂಧನ

ಅಕ್ರಮವಾಗಿ ಗಡಿ ದಾಟಿ ದೇಶದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ 1,568 ಜನರನ್ನು ಬಂಧಿಸಲಾಗಿದೆ.

ರಿಯಾದ್: ಕಾರ್ಮಿಕ, ನಿವಾಸ ಮತ್ತು ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ 11,955 ವಲಸಿಗರನ್ನು ಸೌದಿ ಅರೇಬಿಯಾದಿಂದ ಗಡಿಪಾರು ಮಾಡಲಾಗಿದೆ. ಇದು ಜನವರಿ 9 ರಿಂದ 15 ರವರೆಗಿನ ಅಂಕಿ ಅಂಶ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ಈ ಹಿಂದೆ ಬಂಧಿತರಾದವರನ್ನು ಕಾನೂನು ಪ್ರಕ್ರಿಯೆ ಮುಗಿಸಿ ಮನೆಗೆ ಕಳುಹಿಸಲಾಯಿತು. ಇದೇ ಅವಧಿಯಲ್ಲಿ ಸುಮಾರು 21,485 ಕಾನೂನು ಉಲ್ಲಂಘಿಸುವವರನ್ನು ಹೊಸದಾಗಿ ಬಂಧಿಸಲಾಗಿದೆ.

ಭದ್ರತಾ ಪಡೆಗಳ ವಿವಿಧ ಘಟಕಗಳು ಮತ್ತು ಪಾಸ್‌ಪೋರ್ಟ್‌ ಜನರಲ್ ಡೈರೆಕ್ಟರೇಟ್ (ಜವಾಝಾತ್) ನಡೆಸಿದ ಜಂಟಿ ಕ್ಷೇತ್ರ ವ್ಯಾಪ್ತಿಯ ತಪಾಸಣೆಯಲ್ಲಿ ದೇಶದ ವಿವಿಧ ಭಾಗಗಳಿಂದ ಅವರನ್ನು ಬಂಧಿಸಲಾಗಿದೆ. 13,592 ಜನರು ಇಖಾಮಾ ಮತ್ತು ಹುರುಬ್ ಪ್ರಕರಣ ಮತ್ತು ಇತರರು ನವೀಕರಿಸದೆ ನಿವಾಸ ನಿಯಮವನ್ನು ಉಲ್ಲಂಘಿಸಿದವರಾಗಿದ್ದಾರೆ. 4,853 ಗಡಿ ಭದ್ರತಾ ಉಲ್ಲಂಘಿಸಿದವರು ಮತ್ತು 3,070 ಕಾರ್ಮಿಕ ಕಾನೂನು ಉಲ್ಲಂಘನೆಗಾರರಾಗಿದ್ದಾರೆ.

ಅಕ್ರಮವಾಗಿ ಗಡಿ ದಾಟಿ ದೇಶದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ 1,568 ಜನರನ್ನು ಬಂಧಿಸಲಾಗಿದೆ. ಅವರಲ್ಲಿ 50 ಪ್ರತಿಶತ ಇಥಿಯೋಪಿಯನ್ ಪ್ರಜೆಗಳು. 47 ಪ್ರತಿಶತ ಯೆಮೆನ್ ಮತ್ತು 3 ಪ್ರತಿಶತ ಇತರ ರಾಷ್ಟ್ರೀಯದವರು. ಅಕ್ರಮವಾಗಿ ದೇಶ ತೊರೆಯಲು ಯತ್ನಿಸುತ್ತಿದ್ದ 64 ಮಂದಿಯನ್ನು ಬಂಧಿಸಲಾಗಿದೆ. ನಿವಾಸ, ಉದ್ಯೋಗ ಮತ್ತು ಗಡಿ ಭದ್ರತಾ ಕಾನೂನುಗಳನ್ನು ಉಲ್ಲಂಘಿಸುವವರಿಗೆ ವಿವಿಧ ನೆರವು ನೀಡಿದ್ದಕ್ಕಾಗಿ ಇನ್ನೂ 16 ಜನರನ್ನು ಬಂಧಿಸಲಾಗಿದೆ.

ಪ್ರಸ್ತುತ ವಿಚಾರಣೆ ಎದುರಿಸುತ್ತಿರುವ 33,007 ಅಪರಾಧಿಗಳಲ್ಲಿ 30,335 ಪುರುಷರು ಮತ್ತು 2,672 ಮಹಿಳೆಯರಿದ್ದಾರೆ. ಬಂಧಿತ ವಿದೇಶಿಯರಲ್ಲಿ 25,164 ಮಂದಿಯನ್ನು ತಮ್ಮ ಪ್ರಯಾಣದ ದಾಖಲೆಗಳನ್ನು ಪಡೆಯಲು ಆಯಾ ದೇಶಗಳ ರಾಜತಾಂತ್ರಿಕ ಕಚೇರಿಗಳಿಗೆ ಕಳುಹಿಸಲಾಗಿದೆ. ಈ ಪೈಕಿ 2,864 ಮಂದಿಯನ್ನು ಸ್ವದೇಶಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.

error: Content is protected !! Not allowed copy content from janadhvani.com