ಕಬಕ: ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ಸಂಘ ಕುಟುಂಬಗಳು ಜೊತೆ ಸೇರಿ ನಡೆಸುವ ಮಾಸಿಕ ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್ ಜನವರಿ 11 ರಂದು 8 ಗಂಟೆಗೆ ಸುನ್ನೀ ಸೆಂಟರ್ ಕಬಕದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಮದೀನಾ ಖಲೀಫ ಝೋನ್ ಸದಸ್ಯರಾದ ಬಶೀರ್ ಸಅದಿ ಕಬಕ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ದೀಕ್ ಹಾಜಿ ಕಬಕ ಸದಸ್ಯತ್ವ ಸಂಭ್ರಮದ ಬಗ್ಗೆ ಮಾತನಾಡಿದರು. ಮುಹಿಮ್ಮಾತ್ ಸ್ಥಾಪಕರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ಖ.ಸಿ ರವರ 19 ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದುದಾನ ಸಮ್ಮೇಳನದ ಬಗ್ಗೆ SSF ಕಬಕ ಶಾಖೆಯ ಉಪಾಧ್ಯಕ್ಷರಾದ ಮುಹಮ್ಮದ್ ಮುನೀರ್ ಹಿಮಮಿ ಕಬಕ ಭಾಷಣ ಮಾಡಿದರು. ಸಯ್ಯಿದ್ ತ್ವಾಹಿರುಲ್ ಅಹ್ದಲ್ ಖ.ಸಿ ರವರನ್ನು ಅನುಸ್ಮರಿಸಿ ಅಬ್ದುರ್ರಶೀದ್ ಸಅದಿ ಸಖಾಫಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ SYS ಕಬಕ ಸರ್ಕಲ್ ಕೋಶಾಧಿಕಾರಿಯಾದ ಶಾಹುಲ್ ಹಮೀದ್ ಕಬಕ ಹಾಗೂ SSF SYS KMJ ಯ ನಾಯಕರು ಕಾರ್ಯಕರ್ತರು ಭಾಗವಹಿಸಿದರು.