janadhvani

Kannada Online News Paper

ಇಹ್ಸಾನ್ ಕರ್ನಾಟಕದ ಸೇವೆ, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ- ಸ್ಪೀಕರ್ ಯು.ಟಿ.ಖಾದರ್

ಮಂಗಳೂರು: ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತಂದಿರುವ ಸುನ್ನೀ ಸಂಘಟನೆಗಳ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಇಹ್ಸಾನ್ ಕರ್ನಾಟಕದ ಕಾರ್ಯಾಚರಣೆ ಶ್ಲಾಘನೀಯವಾಗಿದ್ದು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಹೇಳಿದರು.

ಇದು ಉತ್ತರ ಕರ್ನಾಟಕದ ಹಲವೆಡೆ ಪ್ರವಾಸಗೈದಾಗ ನನ್ನ ಗಮನಕ್ಕೆ ಬಂದ ಅಂಶ ವಾಗಿದೆ. 5000 ವಿಧ್ಯಾರ್ಥಿಗಳು ನೂರಾರು ಧಾರ್ಮಿಕ ಲೌಕಿಕ ಶಿಕ್ಷಣ ಸಂಸ್ಥೆಗಳು, ನೂರಾರು ಶಿಕ್ಷಕರನ್ನೊಳಗೊಂಡ ಬೃಹತ್ ಶಿಕ್ಷಣ ಚಳುವಳಿಯಾದ ಇಹ್ಸಾನ್ ಕರ್ನಾಟಕದ ಶೈಕ್ಷಣಿಕ ಚಟುವಟಿಕೆಗಳನ್ನು ನಾನು ಸರ್ಕಾರದ ಗಮನಕ್ಕೆ ತಂದು ರಾಜ್ಯೋತ್ಸವ ಪ್ರಶಸ್ತಿ ಲಭಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಅವರು ಜ.15 ರಂದು ನಗರದಲ್ಲಿ ನಡೆದ ಇಹ್ಸಾನೋತ್ಸವ ಎಕ್ಸಲೆನ್ಸಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ , ಸಾಮಾಜಿಕ ಚಳುವಳಿಯನ್ನು ನಡೆಸುತ್ತಿರುವ ಇಹ್ಸಾನ್ ಕರ್ನಾಟಕ ವತಿಯಿಂದ ಜನವರಿ 19,20 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ಇಹ್ಸಾನೋತ್ಸವ ಪ್ರಯುಕ್ತ ಎಕ್ಸೆಲೆನ್ಸಿ ಮೀಟ್ ಮಂಗಳೂರು ಹೀರಾ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ, ಇಹ್ಸಾನ್ ಉತ್ತರ ಕರ್ನಾಟಕದಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳಿಂದ ಬದಲಾವಣೆ ಸಾಧ್ಯವಾಗಿರುವುದು ಸುನ್ನೀ ಸಂಘಟನೆಗಳಿಗೆ ಅಭಿಮಾನವಾಗಿದೆ ಎಂದು ಅಭಿಪ್ರಾಯ ಪಟ್ಟರು. ಸುನ್ನೀ ಸಂಘಟನೆಗಳ ಕೇಂದ್ರ ಯೋಜನಾ ಮಂಡಳಿ ಅಧ್ಯಕ್ಷರಾದ ಪಿ ಪಿ ಅಹ್ಮದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್ಎಂಎ ರಾಜ್ಯಾಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಪ್ರಾರ್ಥನೆ ನಡೆಸಿದರು. ಇಹ್ಸಾನೋತ್ಸವ -25 ಡೈರೆಕ್ಟರ್ ಮೌಲಾನ ಶಾಫಿ ಸಅದಿ ಮಾತನಾಡಿ ಉತ್ತರ ಕರ್ನಾಟಕ ದಲ್ಲಿ ಇಹ್ಸಾನ್ ಮಾಡಿದ ಸೇವೆಯನ್ನು ವಿವರಿಸಿದರು ಇಹ್ಸಾನ್ ಇಓ ಅನ್ವರ್ ಅಸ್ಸಅದಿ ಡಾಕ್ಯುಮೆಂಟರಿ ಪ್ರದರ್ಶನ ಮೂಲಕ ಅಲ್ಲಿನ ಸ್ಥಿತಿಗತಿಗಳನ್ನು ಮಂಡಿಸಿದರು. ಇಹ್ಸಾನ್ -2030 ಭವಿಷ್ಯದ ಯೋಜನೆಗಳನ್ನು ಇಹ್ಸಾನೋತ್ಸವ -25 ಜನರಲ್ ಕನ್ವೀನರ್ ಡಾ: ಶೇಖ್ ಬಾವ ಮಂಗಳೂರು ಮಂಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್, ಜಂಇಯ್ಯತ್ತುಲ್ ಮುಅಲ್ಲಿಮೀನ್ ರಾಜ್ಯ ಅಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಎಸ್ ಎಂ ಎ ರಾಜ್ಯ ಉಪಾಧ್ಯಕ್ಷ ಹಮೀದ್ ಹಾಜಿ ಕೊಡುಂಗಾಯಿ, ಎಕ್ಸಿಲೆನ್ಸಿ ಚೇಯರ್ ಮೇನ್ ಹಾಜಿ ಸಾಕಿರ್ ಐಸಂ, ಕನ್ವೀನರ್ ಬಿಜಿ ಹನೀಫ್ ಹಾಜಿ ಉಳ್ಳಾಲ, ಮುಸ್ಲಿಂ ಜಮಾತ್ ಜಿಲ್ಲಾಧ್ಯಕ್ಷ ಆಲಿಕುಂಞಿ ಪಾರೆ,ಕೆಸಿಎಫ್ ಇಹ್ಸಾನ್ ಐಸಿ ಕಾರ್ಯದರ್ಶಿ ಇಕ್ಬಾಲ್ ಕಾಜೂರು ದುಬೈ,‌ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು, ಕೆ ಎಂ ಸಿದ್ದೀಖ್ ಮೋಂಟುಗೋಳಿ ಮೊದಲಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹನೀಫ್ ಹಾಜಿ‌ ಬಜಪೆ, ಎಂಬಿಎಂ ಸಾದಿಕ್ ಮಲೆಬೆಟ್ಟು, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಅಶ್ರಫ್ ಕಿನಾರ,ಹಸೈನಾರ್ ಆನೆಮಹಲ್, ಸುಬ್ ಹಾನ್ ಹೊನ್ನಾಳ, ಬದ್ರುದ್ದೀನ್ ಬಜ್ಪೆ,ಕೆಸಿಎಫ್ ನಾಯಕಾರಾದ ಸ್ವಾಲಿಹ್ ಬೆಳ್ಳಾರೆ,,ಹಂಝ ಮೈಂದಾಳ,ಅಶ್ರು ಬಜಪೆ, ಅನ್ವರ್ ಹಾಜಿ ಗೂಡಿನಬಳಿ, ಸಯ್ಯಿದ್ ಖುಬೈಬ್ ತಂಙಳ್, ಕೋ ಆರ್ಡಿನೇಟರ್ ಗಳಾದ ಅಶ್ರಫ್ ಕಿನಾರ ಮಂಗಳೂರು, ಸಲೀಂ ಕನ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

ಇಹ್ಸಾನ್ ಕರ್ನಾಟಕ ಅಧ್ಯಕ್ಷ ಎಂ ವೈ ಅಬ್ದುಲ್ ಹಫೀಳ್ ಸಅದಿ ಸ್ವಾಗತಿಸಿ, ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ವಂದಿಸಿದರು.

error: Content is protected !! Not allowed copy content from janadhvani.com