ಬಂಟ್ವಾಳ: ತಾಲೂಕಿನ ಕೆದಿಲ ಗ್ರಾಮದ ಕುದುಂಬ್ಲಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಶೈಖುನಾ ಅಲ್-ಹಾಜ್ ಎಂ.ಇ ಅಬ್ದುರ್ರಝ್ಝಾಕ್ ಮದನಿ, ಕಾಮಿಲ್ ಸಖಾಫಿ, ಅಲ್ ಫುರ್ಖಾನಿ ಉಸ್ತಾದರ ಸಾರಥ್ಯದ _ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ, ಕುದುಂಬ್ಲಾಡಿ_ ಸಂಸ್ಥೆಯ 6ನೇ ವಾರ್ಷಿಕ ಸಮ್ಮೇಳನ, ಅಜ್ಮೀರ್ ಮೌಲಿದ್, ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಇಂದು (16-01-2025-ಗುರುವಾರ) ನಡೆಯಲಿದೆ.
ಸಂಜೆ 5 ಘಂಟೆಗೆ ಅಸ್ಸಯ್ಯಿದ್ ಸಾಬಿತ್ ಮುಈನಿ, ಅಸ್ಸಖಾಫಿ ಪಾಟ್ರಕೋಡಿ ತಙ್ಙಳ್‌ರವರು ಅಜ್ಮೀರ್ ಮೌಲಿದ್‌ಗೆ ನೇತೃತ್ವ ನೀಡಿದರೆ ಮಗ್ರಿಬ್ ನಮಾಝ್‌ನ ನಂತರ ನಡೆಯಲಿರುವ ಜಲಾಲಿಯ್ಯಾ ರಾತೀಬ್ ಮಜ್‌ಲಿಸ್‌ಗೆ ‘ಪಾಟ್ರಕೋಡಿ ತಂಙ್ಙಳ್’ ಎಂದೇ ಖ್ಯಾತರಾದ ಅಸ್ಸಯ್ಯಿದ್ ಇಬ್ರಾಹೀಮ್ ಹಂಝ ತಙ್ಙಳ್ ಅಲ್-ಹಾದಿ ಪಾಟ್ರಕೋಡಿ ತಙ್ಙಳ್‌ರವರು ನೇತೃತ್ವ ನೀಡಲಿದ್ದಾರೆ.
ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯಾಧ್ಯಕ್ಷರೂ, ಸಂಸ್ಥೆಯ ಪ್ರಮುಖ ನಿರ್ದೇಶಕರೂ ಆದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರು ದುಆಃ ಆಶಿರ್ವಚನ ನೀಡಿದರೆ, ಪಾಟ್ರಕೋಡಿ ಜುಮುಅಃ ಮಸ್ಜಿದ್ ಖತೀಬರಾದ ಖಲಂದರ್ ಶಾಫಿ ಬಾಖವಿಯವರು ಉದ್ಘಾಟಿಸಲಿದ್ದಾರೆ.
ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ಅಲ್-ಹಾಜ್ ಎಂ.ಇ ಅಬ್ದುರ್ರಝ್ಝಾಕ್ ಮದನಿ, ಕಾಮಿಲ್ ಸಖಾಫಿ, ಅಲ್ ಫುರ್ಖಾನಿ ಸೂರಿಕುಮೇರು ಉಸ್ತಾದರು ಪ್ರಾಸ್ತಾವಿಕ ಭಾಷಣ ನಡೆಸಿದರೆ, ಪ್ರಖ್ಯಾತ ವಾಗ್ಮಿ, ಉಸ್ತಾದ್ ನೌಫಲ್ ಸಖಾಫಿ ಅಲ್-ಹಿಕಮಿ ಕಳಸರವರು ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಪ್ರಮುಖ ಆಧ್ಯಾತ್ಮಿಕ ನಾಯಕರಾದ ಅಸ್ಸಯ್ಯಿದ್ ಅಬ್ದುಲ್ಲತೀಫ್ ಅಹ್ಸನಿ ಬಾಅಲವಿ ತಂಙಳ್ ಅರಿಕ್ಕೋಡ್‌ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಸಮಾರೋಪಗೊಳ್ಳಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು, ಅನೇಕ ಉಲಮಾ-ಉಮರಾಗಳು ಭಾಗವಹಿಸಲಿದ್ದಾರೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಐ.ಕೆ ಇಕ್ಬಾಲ್ ಮದನಿ ಕುಕ್ಕೋಟ್ಟು ಜನಧ್ವನಿ ಪ್ರಕಟನೆಗೆ ತಿಳಿಸಿದ್ದಾರೆ.