ಜಿದ್ದಾ: ಸೌದಿ ಅರೇಬಿಯಾದಲ್ಲಿರುವ ವಿದೇಶಿಯರಿಗೆ ಅಂತಿಮ ನಿರ್ಗಮನ ವೀಸಾ ಲಭಿಸಲು ಇಕಾಮಾದಲ್ಲಿ ಕನಿಷ್ಠ 30 ದಿನಗಳ ಅವಧಿ ಕಡ್ಡಾಯವಾಗಿದೆ ಎಂದು ಸೌದಿ ಪಾಸ್‌ಪೋರ್ಟ್ ನಿರ್ದೇಶನಾಲಯ (ಜವಾಝಾತ್) ಪ್ರಕಟಿಸಿದೆ.
ಇಖಾಮಾ ಅವಧಿಯು 30 ದಿನಗಳಿಗಿಂತ ಕಡಿಮೆಯಿದ್ದರೆ ಅಂತಿಮ ನಿರ್ಗಮನ ವೀಸಾವನ್ನು ನೀಡಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಿರ್ಗಮನ ವೀಸಾ ಪಡೆಯಲು ಇಖಾಮಾವನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ. ಇಕಾಮಾದ ಅವಧಿಯು 30 ಮತ್ತು 60 ದಿನಗಳ ನಡುವೆ ಇದ್ದರೆ, ಅಂತಿಮ ನಿರ್ಗಮನ ವೀಸಾ ಇಕಾಮಾದ ಉಳಿದ ಅವಧಿಗೆ ಮಾನ್ಯವಾಗಿರುತ್ತದೆ.
ಅದೇ ಸಮಯದಲ್ಲಿ, ಇಕಾಮಾವು 60 ದಿನಗಳಿಗಿಂತ ಹೆಚ್ಚು ಕಾಲ ಮಾನ್ಯವಾಗಿದ್ದರೆ, ಅಂತಿಮ ನಿರ್ಗಮನ ವೀಸಾವು 60 ದಿನಗಳವರೆಗೆ ಮಾನ್ಯವಾಗಿರುತ್ತದೆ.
ಈ ಹಿಂದೆ, ಇಖಾಮಾ ಅವಧಿ ಮುಗಿಯುವ ದಿನದಂದು ಅಂತಿಮ ನಿರ್ಗಮನವನ್ನು ನೀಡಿದರೆ, ನಿರ್ಗಮನ ವೀಸಾ ಅವಧಿಯು 60 ದಿನಗಳವರೆಗೆ ಮಾನ್ಯವಾಗಿತ್ತು. ಆದರೆ ಈ ಪ್ರಯೋಜನ ಇನ್ನು ಮುಂದೆ ಲಭ್ಯವಾಗುವುದಿಲ್ಲ ಎಂಬುದು ಜವಾಝಾತ್ ನಿಂದ ಬಂದ ಇಂದಿನ ಪ್ರಕಟಣೆಯಿಂದ ಸ್ಪಷ್ಟವಾಗಿದೆ.
Javazat ಅಧಿಸೂಚನೆ ಕೆಳಗೆ ಲಭ್ಯವಿದೆ.