ರಿಯಾದ್: ಸೌದಿ ಅರೇಬಿಯಾದಲ್ಲಿ ವಿಪರೀತ ಚಳಿ. ತಾಪಮಾನದಲ್ಲಿ ಗಮನಾರ್ಹ ಕುಸಿತ ಸಾಧ್ಯತೆ. ಶನಿವಾರದಿಂದ ತಾಪಮಾನವು ನಾಲ್ಕು ಡಿಗ್ರಿ ಸೆಲ್ಸಿಯಸ್ ಮತ್ತು ಶೂನ್ಯ ಡಿಗ್ರಿ ಸೆಲ್ಸಿಯಸ್ ನಡುವೆ ಇಳಿಯುವ ನಿರೀಕ್ಷೆಯಿದೆ.
ದೇಶದ ಉತ್ತರ ಭಾಗದಲ್ಲಿ ಚಳಿಗಾಲವು ಹೆಚ್ಚು ತೀವ್ರವಾಗಿರುತ್ತದೆ. ತಬೂಕ್, ಅಲ್ ಜೌಫ್, ಉತ್ತರದ ಗಡಿಗಳು, ಹಾಯಿಲ್ ಮತ್ತು ಮದೀನಾದ ಉತ್ತರದ ಪ್ರದೇಶಗಳಲ್ಲಿ ತೀವ್ರ ಚಳಿ ಇರಲಿದೆ. ಈ ಸ್ಥಳಗಳಲ್ಲಿ, ಜನವರಿ 3 ಶುಕ್ರವಾರದವರೆಗೆ ಇದೇ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ.
ಈಗಾಗಲೇ ದೇಶದ ಹಲವೆಡೆ ಚಳಿ ಹೆಚ್ಚಿದೆ. ಮುಂದಿನ ವಾರ ದೇಶವು ಈ ಚಳಿಗಾಲದ ಪ್ರಬಲವಾದ ಶೀತ ಅಲೆಯನ್ನು ಅನುಭವಿಸುತ್ತದೆ ಎಂದು ಜನರು ಹರಡಿರುವ ವದಂತಿಗಳು ನಿಜವಲ್ಲ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರದ ವಕ್ತಾರ ಹುಸೈನ್ ಅಲ್ ಖತಾನಿ ಹೇಳಿದ್ದಾರೆ.