janadhvani

Kannada Online News Paper

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ವಾರ್ಷಿಕ ಕೌನ್ಸಿಲ್ : ಸಾರಥ್ಯ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 20-12-24 ರಂದು ಬರ್ಕಾ ಫುಡ್ ಹೌಸ್ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತರರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗ ಕಾರ್ಯದರ್ಶಿ ಸೈಯಿದ್ ಆಬಿದ್ ಅಲ್ ಹೈದರೂಸಿ ತಂಙಳ್ ರವರ ದುಆದೊಂಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್ ರವರು ಉದ್ಘಾಟಿಸಿದರು.

ಸಭೆಯಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿಯವರು ಅಧ್ಯಕ್ಷತೆ ವಹಿಸಿದರು. KCF ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ವಾರ್ಷಿಕ ವರದಿ ವಾಚಿಸದರು. ಕೋಶಾಧಿಕಾರಿ ಆರಿಫ್ ಕೋಡಿಯವರು ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಮಂಜೂರು ಮಾಡಿ ಪ್ರಸ್ತುತ ಸಮಿತಿಯನ್ನು ಬರ್ಕಾಸ್ತು ಗೊಳಿಸಲಾಯಿತು.

ನಂತರ ನಡೆದ ಸಭೆಯಲ್ಲಿ ಉಮರ್ ಸಖಾಫಿ ಉಸ್ತಾದ್ ಎಡಪ್ಪಾಲ್ ರವರು ಸಂಘಟನೆಯ ಪ್ರಾಮುಖ್ಯತೆಯ ಬಗ್ಗೆ ಕಾರ್ಯಕರ್ತರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ರಾಷ್ಟ್ರೀಯ ನಾಯಕರುಗಳು ಹಾಗೂ ಝೋನ್ ನಾಯಕರುಗಳನ್ನು ಗುರುತಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ನಂತರ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯಿಂದ ಬಂದ ಆರ್.ಒ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಡಿಪಿ ಯೂಸುಫ್ ಸಖಾಫಿ ಉಸ್ತಾದ್ ಬೈತಾರ್ ಹಾಗೂ ಸೈಯಿದ್ ಆಬಿದ್ ಅಲ್ ಹೈದರೂಸಿ ತಂಙಳ್ ರವರು ನೂತನ ಸಮಿತಿಯನ್ನು ರಚಿಸಿ ಜವಾಬ್ಧಾರಿಯನ್ನು ಹಸ್ತಾಂತರಿಸಲಾಯಿತು.

ಕೆಸಿಎಪ್ ಒಮಾನ್ ನೂತನ ಸಮಿತಿಯ ಅಧ್ಯಕ್ಷರಾಗಿ ಹಂಝ ಹಾಜಿ ಕನ್ನಂಗಾರ್ ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್ ಪಾಲೆತ್ತಡ್ಕ, ಕೋಶಾಧಿಕಾರಿಯಾಗಿ ಕಲಂದರ್ ಬಾಷಾ ತೀರ್ಥಹಳ್ಳಿ, ಸಂಘಟನಾಧ್ಯಕ್ಷರಾಗಿ ಉಮರ್ ಸಖಾಫಿ ಉಸ್ತಾದ್ ಎಡಪ್ಪಾಲ್, ಸಂಘಟನಾ ಕಾರ್ಯದರ್ಶಿಯಾಗಿ ಹಾರಿಸ್ ಕೊಳಕೇರಿ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಬ್ಬಾಸ್ ಮರಕ್ಕಡ ಸುಳ್ಯ, ಸಾಂತ್ವನ ಕಾರ್ಯದರ್ಶಿಯಾಗಿ ಮುಹಮ್ಮದ್ ಇರ್ಫಾನ್ ಕೂರ್ನಡ್ಕ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಸ್ವಾದಿಕ್ ಹಾಜಿ ಸುಳ್ಯ, ಕಾರ್ಯದರ್ಶಿಯಾಗಿ ನವಾಝ್ ಮಣಿಪುರ, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಎರ್ಮಾಳ್, ಕಾರ್ಯದರ್ಶಿಯಾಗಿ ಶಫೀಕ್ ಮಾರ್ನಬೈಲ್, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಉಬೈದುಲ್ಲಾ ಸಖಾಫಿ ಮಿತ್ತೂರು, ಕಾರ್ಯದರ್ಶಿಯಾಗಿ ಅಶ್ರಫ್ ಕುತ್ತಾರ್, ಆಡಳಿತ ಮತ್ತು ಸಾರ್ವಜನಿಕ ವಿಭಾಗದ ಅಧ್ಯಕ್ಷರಾಗಿ
ಝುಬೈರ್ ಸಅದಿ ಪಾಟ್ರಕೋಡಿ, ಕಾರ್ಯದರ್ಶಿಯಾಗಿ ಅಬ್ದುಲ್ ಸಫ್ವಾನ್ ಕರೋಪಾಡಿ, ಪ್ರೊಫೆಷನಲ್ ವಿಭಾಗದ ಅಧ್ಯಕ್ಷರಾಗಿ ಹನೀಫ್ ಮನ್ನಾಪು, ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಮಾದ್ಯಮ ವಿಭಾಗದ ಕೋ ಆರ್ಡೀನೇಟರಾಗಿ ಅಬ್ದುಲ್ ವಾರಿಸ್ ಮಣಿಪುರ, ಉರ್ದು ವಿಂಗ್ ಕೋ ಆರ್ಡೀನೇಟರಾಗಿ ಸಲೀಂ ಮಿಸ್ಬಾಹಿ ಉಸ್ತಾದ್ ಕನ್ಯಾನ, ಅಂತರಾಷ್ಟೀಯ ಸಮಿತಿ ಕಾನ್ಸಿಲರ್ ಗಳಾಗಿ ಸಯ್ಯಿದ್ ಆಬಿದ್ ಅಲ್ ಹೈದರೂಸಿ, ಇಕ್ಬಾಲ್ ಹಾಜಿ ಬರ್ಕ, ಜನಾಬ್ ಅಯ್ಯೂಬ್ ಕೋಡಿ, ಆರಿಫ್ ಕೋಡಿ, ಇಬ್ರಾಹೀಂ ಹಾಜಿ ಅತ್ರಾಡಿ. ಇವರುಗಳನ್ನು ಆರಿಸಲಾಯಿತು. ಸ್ವಾದಿಕ್ ಹಾಜಿ ಸುಳ್ಯ ಸ್ವಾಗತಿಸಿ ನೂತನ ಕಾರ್ಯದರ್ಶಿ ಸಂಶುದ್ದೀನ್ ಪಾಲೆತ್ತಡ್ಕ ವಂದಿಸಿದರು.

error: Content is protected !! Not allowed copy content from janadhvani.com