janadhvani

Kannada Online News Paper

ಪುತ್ತೂರು ಝೋನ್ ಎಸ್ ವೈಎಸ್ ಹಾಗೂ ಸರ್ಕಲ್ ಟೋಪ್ಸ್ ಸಂಗಮ

ಪುತ್ತೂರು: ಕರ್ನಾಟಕ ರಾಜ್ಯ ಎಸ್ ವೈಎಸ್ ಪುತ್ತೂರು ಝೋನ್ ಸಮಿತಿ ಹಾಗೂ ಝೋನ್ ವ್ಯಾಪ್ತಿಯ ಪುತ್ತೂರು, ಕಬಕ, ಮಾಣಿ, ರೆಂಜ, ಕುಂಬ್ರ, ಮಾಡಾವು, ಈಶ್ವರಮಂಗಲ, ಎಂಬ ಏಳು ಸರ್ಕಲ್ ನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಸಾಂತ್ವನ ಕಾರ್ಯದರ್ಶಿ, ಇಸಾಬಾ ಕಾರ್ಯದರ್ಶಿ ಗಳನ್ನೊಳಗೊಂಡ ಟೋಪ್ಸ್ ಸಂಗಮವು ಝೋನ್ ಅಧ್ಯಕ್ಷ ಅಬೂ ಶಝ ಅಬ್ದುಲ್ ರಝಾಕ್ ಅಲ್ ಖಾಸಿಮಿ ಕೂರ್ನಡ್ಕ ರವರ ಅಧ್ಯಕ್ಷತೆಯಲ್ಲಿ ಪ್ರೆಸ್ಟೀಜ್ ಪೆವಿಲಿಯನ್ ಹಾಲ್ ನಲ್ಲಿ ನಡೆಯಿತು.

ಎಸ್ ವೈಎಸ್ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರು ಪ್ರಸ್ತುತ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು. ಈಸ್ಟ್ ಜಿಲ್ಲಾ ಇಸಾಬಾ ಕಾರ್ಯದರ್ಶಿ ಉಸ್ಮಾನ್ ಸೋಕಿಲ ರವರು ಇಸಾಬಾ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪ್ರ. ಕಾರ್ಯದರ್ಶಿ ಸ್ವಾಲಿಹ್ ಮುರ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲ ರವರು ಸಾಂದರ್ಭಿಕವಾಗಿ ಮಾತನಾಡಿದರು.

ಝೋನ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ರವರ ನಾಯಕತ್ವದಲ್ಲಿ ಸರ್ಕಲ್ ಪಿಟಿಸಿ ಕ್ಯಾಂಪ್ ಬಗ್ಗೆ ಅವಲೋಕನ ನಡೆಸಲಾಯಿತು. ಪುತ್ತೂರು ಝೋನ್ ಜಂಇಯತುಲ್ ಉಲಮಾ ಪ್ರ. ಕಾರ್ಯದರ್ಶಿ ಯಾಗಿ ಆಯ್ಕೆಗೊಂಡ ಅಬ್ದುಲ್ ಅಝೀಝ್ ಮಿಸ್ಬಾಹಿ ರವರನ್ನು ಝೋನ್ ಎಸ್ ವೈಎಸ್ ವತಿಯಿಂದ ಶಾಲುಹೊದಿಸಿ ಸನ್ಮಾನಿಸಲಾಯಿತು.
ನಮ್ಮನ್ನಗಲಿದ ಸಿದ್ದೀಕ್ ಹಾಜಿ ಕಬಕ ರವರ ತಂದೆಯವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಮಾಡಿ ಪ್ರಾರ್ಥಿಸಲಾಯಿತು.

ಸಂಗಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಚೆನ್ನಾರ್, ಝೋನ್ ಕೋಶಾಧಿಕಾರಿ ಅಬೂಬಕರ್ ನರಿಮೊಗರು, ನೌಷಾದ್ ಸಅದಿ ಗಟ್ಟಮನೆ, ಶಮೀರ್ ಸಖಾಫಿ ರೆಂಜಲಾಡಿ, ಝೋನ್ ಇಸಾಬಾ ಕಾರ್ಯದರ್ಶಿ ರಝಾಕ್ ಹಿಮಮಿ ರೆಂಜ, ಝೋನ್ ದಅವಾ ಕಾರ್ಯದರ್ಶಿ ಹೈದರ್ ಸಖಾಫಿ ಬುಡೋಳಿ, ಅಬ್ದುಲ್ಲ ಕಾವು, ಸಾಂತ್ವನ ಕಾರ್ಯದರ್ಶಿ ಫವಾಝ್ ಕಟ್ಟತ್ತಾರು, ಮುನೀರ್ ಹನೀಫಿ ಅರಿಕ್ಕಿಲ, ಇರ್ಫಾನ್ ಹಿಮಮಿ, ಖಾಸಿಮ್ ಪೇರಲ್ತಡ್ಕ, ಕೆಪಿ ಉಮರ್ ನರಿಮೊಗರು , ಶಾಹುಲ್ ಹಮೀದ್ ಕಬಕ, ಶಮೀರ್ ಕೊಡಿಪ್ಪಾಡಿ, ಜಲೀಲ್ ಮುಸ್ಲಿಯಾರ್ ಕೋಡಾಜೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com