ಮಂಗಳೂರು:ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಜನವರಿ 1 ರಿಂದ ಜನವರಿ 20 ರ ತನಕ ರಾಜ್ಯ ವ್ಯಾಪಿ “ಸತ್ಫಥದ ಸಂಕಲ್ಪ” ಎಂಬ ಘೋಷಣೆಯಲ್ಲಿ ನಡೆಯಲಿರುವ ಸದಸ್ಯತ್ವ ಸಡಗರ ಅಭಿಯಾನದ ಜಿಲ್ಲಾ ಮಟ್ಟದ ಸದಸ್ಯತನ ಮಾಹಿತಿ ಕಾರ್ಯಾಗಾರ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕರೆ ರವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 15 ಆದಿತ್ಯವಾರ ಮಧ್ಯಾಹ್ನ 2:30 ಗಂಟೆಗೆ ತಾಜುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ತಿಬ್ಲೆಪದವು ವಿನಲ್ಲಿ ನಡೆಯಲಿರುವುದು.
ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿಗಳಾದ ಮನ್ಸೂರ್ ಅಲಿ ಕೋಟಗದ್ದೆ ಹಾಗೂ ಇಬ್ರಾಹಿಂ ಖಲೀಲ್ ಮಾಲಿಕಿ ರವರು ಸದಸ್ಯತನ ಮಾಹಿತಿ ಕಾರ್ಯಾಗಾರದಲ್ಲಿ ತರಗತಿಯನ್ನು ನಡೆಸಲಿದ್ದಾರೆ ಎಂದು ಎಸ್.ವೈ.ಎಸ್ ದ.ಕ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.