ಕುವೈತ್ ಸಿಟಿ: ಕುವೈತ್‌ನಲ್ಲಿ ಕುಟುಂಬ ಭೇಟಿ ವೀಸಾ ಅವಧಿಯನ್ನು ಮೂರು ತಿಂಗಳಿಗೆ ಹೆಚ್ಚಿಸಲಾಗುವುದು. ಇದನ್ನು ಆಂತರಿಕ ಸಚಿವಾಲಯದ ಸಹಾಯಕ ಅಧೀನ ಕಾರ್ಯದರ್ಶಿ ಮೇಜರ್ ಜನರಲ್ ಅಲಿ ಅಲ್ ಅದಾನಿ ಹೇಳಿದ್ದಾರೆ. ಈ ಹಿಂದೆ ಒಂದು ತಿಂಗಳ ಅವಧಿಯ ಕುಟುಂಬ ಭೇಟಿ ವೀಸಾ ನೀಡಲಾಗುತ್ತಿತ್ತು.
ಅದೇ ಸಮಯದಲ್ಲಿ, ವೀಸಾ ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಲಿ ಅಲ್ ಅದಾನಿ ಹೇಳಿದ್ದಾರೆ. ಅಂತಹ ವ್ಯಕ್ತಿಗಳಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಹತ್ತು ಸಾವಿರ ದಿನಾರ್‌ಗಳವರೆಗೆ ದಂಡ ವಿಧಿಸಲಾಗುತ್ತದೆ.
ವೀಸಾ ಕಾಲಾವಧಿಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಉಲ್ಲಂಘನೆ ಕಂಡುಬಂದಲ್ಲಿ, ‘ಸಹ್ಲ್’ ಅಪ್ಲಿಕೇಶನ್ ಮೂಲಕ ಸೂಚನೆ ನೀಡಲಾಗುತ್ತದೆ, ಸೂಚನೆಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು.
ಇತ್ತೀಚೆಗೆ, ಕ್ಯಾಬಿನೆಟ್ ಹೊಸ ನಿವಾಸ ಕಾಯ್ದೆಗೆ ಅನುಮೋದನೆ ನೀಡಿದೆ. ಇದರ ನಂತರ ಕುಟುಂಬ ಭೇಟಿ ವೀಸಾ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ ವೀಸಾಗೆ ಅರ್ಜಿ ಸಲ್ಲಿಸುವ ಇತರ ಮಾನದಂಡಗಳನ್ನು ಬದಲಾಯಿಸಲಾಗಿಲ್ಲ. ವೀಸಾ ಶುಲ್ಕ ರಚನೆಯನ್ನು ಅಧ್ಯಯನ ಮಾಡಲು ವಿಶೇಷ ಸಮಿತಿಯನ್ನು ರಚಿಸಲಾಗುವುದು. ಸಮಿತಿಯ ಶಿಫಾರಸ್ಸಿನಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.