ಮಂಗಳೂರು: ರಾಜ್ಯದ ಜನತೆ ನೈಜ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಕೇಂದ್ರ ಸರಕಾರ ರಾಜ್ಯದ ಪಾಲಿನ ತೆರಿಗೆ ಹಣವನ್ನು ಪಾವತಿಸಲು ನಿರಾಕರಿಸುತ್ತಿರುವಾಗ, ಅಧಾನಿ ಸಾಮ್ರಾಜ್ಯ ಶಿಥಿಲ ಗೊಳ್ಳುತ್ತಿರುವಾಗ, ಕೇಂದ್ರ ಸರಕಾರದ ಹುದ್ದೆಗಳ ನೇಮಕಾತಿ ಸಮಸ್ಯೆ ಇತ್ಯಾದಿಗಳನ್ನು ಮರೆಮಾಚುವುದು, ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ಪ್ರಭಲ ವಿರೋಧದ ಪ್ರಮಾಣವನ್ನು ನಿಯಂತ್ರಿಸಲು ಬಿಜೆಪಿಗರು, ತನ್ನ ಪ್ರಹಸನ ಪಟ್ಟಿಗೆ ವಕ್ಫ್, ಝಮೀರ್ ಅಹಮ್ಮದ್ ಖಾನ್, ಮುಸ್ಲಿಮ್ ಮೀಸಲಾತಿ ಎಂಬ ಹೊಸ ಶೀರ್ಷಿಕೆಗಳನ್ನು ಸೇರ್ಪಡೆ ಮಾಡಿದೆ.
ಬಿಜೆಪಿಗರು ನಾಟಕಕಾರರ ಬಣ್ಣ ಹಚ್ಚಿ ಅಲ್ಲಲ್ಲಿ ಪ್ರಹಸನ ತಂಡಗಳನ್ನು ರಚಿಸಿ ಅಭಿನಯ ಮಾಡುತ್ತಿರುವುದರ ಹಾಲಿ ಶೀರ್ಷಿಕೆ ‘ ವಕ್ಫ್ ‘ ಆಗಿದೆ. ಜಿಲ್ಲೆಯಲ್ಲಿ ಬಿಜೆಪಿಯ ಪ್ರಮುಖರು ವಕ್ಫ್ ಸ್ತಿರಾಸ್ತಿಯನ್ನು ಕಬಳಿಸಿರುವುದರ ಸಂಭಾಷಣೆಯನ್ನು ಹೇಳುವುದು ಬಿಟ್ಟು , ಕಬಳಿಕೆಯ ವಿಷಯದಲ್ಲಿ ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಲಿ, ಜಿಲ್ಲೆಯ ಬಿಜೆಪಿಗರು ದ.ಕ.ಜಿಲ್ಲೆಯನ್ನು ಗುಜರಾತೀಕರಣ ಮಾಡುವುದನ್ನು ತಡೆದು ನಿಲ್ಲಿಸುವ ನೈಜ ಪರಿಹಾರ ಕಂಡುಕೊಳ್ಳಲಿ.
ಕೆ.ಅಶ್ರಫ್ ( ಮಾಜಿ ಮೇಯರ್)
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.