ಬೆಂಗಳೂರು:- ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಬ್ಯಾರಿ ಸೌಹಾರ್ದ ಭವನ ಎಚ್ ಬಿ ಆರ್ ಲೇಔಟ್ ಕಮ್ಮನಹಳ್ಳಿ ಬೆಂಗಳೂರಿನಲ್ಲಿ 10/11/2024 ಭಾನುವಾರ ಬಹಳ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಸಯ್ಯದ್ ಶೌಕತ್ ಅಲಿ ಸಖಾಫಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು.
6 ವಿವಿಧ ವೇದಿಕೆಗಳಲ್ಲಿ ನೂರ ಇಪ್ಪತ್ತು ಸ್ಪರ್ಧೆಗಳು ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ 7 ಡಿವಿಷನ್ ಗಳಿಂದ ಆಯ್ಕೆಯಾದ 800 ರಷ್ಟು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.ತೀರ್ಪುಗಾರರಾಗಿ ಡಾ.ಹನೀಫ್ ಅಂಜದಿ,ಆರಿಫ್ ಸಅದಿ,ಉಸ್ಮಾನ್ ನಿಝಾಮಿ,ನಾಸಿರ್ ಬಜ್ಪೆ,ಸಿನಾನ್ ಇಂದಬೆಟ್ಟು,ಅಡ್ವಕೇಟ್ ಅಸೀಮ್ ನೂರಾನಿ,ಶಮೀರ್ (ಯಂಶ) ಬೇಂಗಿಲ,ಸವಾದ್ ಕುಂಬ್ರ,ಸುಹೈಬ್ ರಝಾ ಸಖಾಫಿ ಭಾಗವಹಿಸಿದ್ದರು.
ಎಲೆಕ್ಟ್ರಾನಿಕ್ ಸಿಟಿ ಮುಹಮ್ಮದ್ ಸುಹೈಲ್ ಸ್ಟಾರ್ ಆಫ್ ದಿ ಫೆಸ್ಟ್ ಹಾಗೂ ಮೆಜೆಸ್ಟಿಕ್ ಡಿವಿಷನ್ ಸಲ್ಮಾನುಲ್ ಫಾರಿಸ್ ನಿಝಾಮಿ ಪೆನ್ ಆಫ್ ದಿ ಪೆಸ್ಟ್ ಗಳಾಗಿ ಹೊರ ಹೊಮ್ಮಿದರು.
ಸಾಹಿತ್ಯೋತ್ಸವ ಸ್ವಾಗತ ಸಮಿತಿ ಚೇರ್ಮ್ಯಾನ್ ಹಬೀಬ್ ನೂರಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಎಸ್.ಎಮ್.ಎ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹ್‌ಮಾನ್ ಹಾಜಿ ಉದ್ಘಾಟಿಸಿದರು.ಸಾಹಿತ್ಯೋತ್ಸವ ಚೇರ್ಮಾನ್ ಫಾರೂಕ್ ಅಮಾನಿ ದಿಕ್ಸೂಚಿ ಭಾಷಣ ಮಾಡಿದರು.ಮುಖ್ಯ ಪ್ರಭಾಷಣ ಮಾಡಿದ ಅನಸ್ ಸಿದ್ದೀಖಿ ಉಸ್ತಾದ್ ಸಾಹಿತ್ಯೋತ್ಸವದ ಮಹತ್ವವನ್ನು ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಉಂಟು ಮಾಡುವ ಪ್ರಭಾವವನ್ನು ವಿವರಿಸಿದರು.,ಜಯನಗರ ಡಿವಿಷನ್ ಅತೀ ಹೆಚ್ಚು ಅಂಕಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಮುಡಿಲೇರಿಸಿತು.ರನ್ನರ್ ಆಫ್ ಆಗಿ ಮೆಜೆಸ್ಟಿಕ್ ಡಿವಿಷನ್ ಹಾಗು ಶಿವಾಜಿ ನಗರ ಡಿವಿಷನ್ ತೃತೀಯ ಸ್ಥಾನ ಪಡೆದು ಕೊಂಡಿತು.ಮುಖ್ಯ ಅತಿಥಿಗಳಾಗಿ ಎಸ್.ಎಮ್.ಎ ಜಿಲ್ಲಾ ಅಧ್ಯಕ್ಷ ಅಬ್ದುಲ್ ಹಕೀಂ ಆರ್.ಟಿ.ನಗರ,ಎಸ್ ವೈ ಯಸ್ ರಾಜ್ಯ ಉಪಾಧ್ಯಕ್ಷರಾದ ಬಶೀರ್ ಸಹದಿ ಪೀಣ್ಯ ,ಎಸ್ ಜೆ ಎಂ ಜಿಲ್ಲಾದ್ಯಕ್ಷ ಅಬ್ಬಾಸ್ ನಿಜಾಮಿ ,ಜಿಲ್ಲಾ ಎಸ್.ವೈ.ಎಸ್ ಅಧ್ಯಕ್ಷ ಜಾಫರ್ ನೂರಾನಿ, ರಾಜ್ಯ ಎಸ್.ವೈ.ಎಸ್ ನೇತಾರ ನಾಸಿರ್ ಕ್ಲಾಸಿಕ್,ಜಿಲ್ಲಾ ಎಸ್.ವೈ.ಎಸ್ ಕೋಶಾಧಿಕಾರಿ ಶರ್ಶಾದ್ ,ಸ್ವಾಗತ ಸಮಿತಿ ಕೋಶಾಧಿಕಾರಿ ಶಾಫಿ ಸಹದಿ ಮೆಜೆಸ್ಟಿಕ್ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಲತೀಫ್ ನಈಮಿ ,ಕಾರ್ಯದರ್ಶಿ ಸಬೀಬ್ ,ಮತ್ತಿತರ ಉಲಮಾ ಉಮರಾ ಮತ್ತು ಸಂಘಟನಾ ನೇತಾರರು ಉಪಸ್ಥಿತರಿದ್ದರು .ಸಾಹಿತ್ಯೋತ್ಸವ ಕನ್ವಿನರ್ ಅಲ್ತಾಫ್ ಅಲಿ ಸ್ವಾಗತಿಸಿ ,ಸ್ವಾಗತ ಸಮಿತಿ ಕನ್ವಿನರ್ ಮುನೀರ್ ಧನ್ಯವಾದವಿತ್ತರು . .