ದುಬೈ: ರೋಡ್ಸ್ ಅಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿಯು (ಆರ್ಟಿಎ) ಈದುಲ್ ಫಿತರ್ ರಜಾದಿನಗಳಲ್ಲಿ ದುಬೈನಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ಘೋಷಿಸಿದೆ.
ಗುರುವಾರ (14)ರಿಂದ ರವಿವಾರದ ವರೆಗೆ ಪಾರ್ಕಿಂಗ್ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ ಮಲ್ಟಿ ಪಾರ್ಕಿಂಗ್ ವ್ಯವಸ್ಥೆಗೆ ಇದು ಅನ್ವಯಿಸುವುದಿಲ್ಲ.
ರಜಾದಿನಗಳಲ್ಲಿ, ಆರ್ಟಿಎ ಬಸ್, ಮೆಟ್ರೋ ಮತ್ತು ಟ್ರಾಮ್ಗಳನ್ನು ಹೆಚ್ಚಿಸಲಾಗುವುದು. ಗ್ರಾಹಕರ ಹ್ಯಾಪಿನೆಸ್ ಕೇಂದ್ರಗಳು ರಮಝಾನ್ 29 ರಿಂದ ಶವ್ವಾಲ್ 3ರ ವರೆಗೆ ತೆರೆದಿರುತ್ತದೆ. ಮೆಟ್ರೊ ಕೆಂಪು ಹಳಿ ಸ್ಟೇಶನ್ ಗಳು ಗುರುವಾರ ಬೆಳಗ್ಗೆ 5 ರಿಂದ ಮುಂಜಾನೆ 2 ರ ವರೆಗೆ ಕಾರ್ಯನಿರ್ವಹಿಸುತ್ತವೆ. ಶುಕ್ರವಾರ ಬೆಳಗ್ಗೆ 10 ರಿಂದ ಮರುದಿನ ಮುಂಜಾನೆ 2 ರವರೆಗೆ, ಶನಿವಾರ ಬೆಳಿಗ್ಗೆ 5 ಗಂಟೆ ಯಿಂದ ಮುಂಜಾನೆ 2 ಗಂಟೆಯ ವರೆಗೆ ಕಾರ್ಯಾಚರಿಸಲಿದೆ.
ಗ್ರೀನ್ ಹಳಿ ಸ್ಟೇಷನ್‌ಗಳು 14ರಂದು ಬೆಳಗ್ಗೆ 5:30 ರಿಂದ ಮುಂಜಾನೆ 2 ರವರೆಗೆ ಮತ್ತು 15ರಂದು ಬೆಳಿಗ್ಗೆ 10 ರಿಂದ ಮುಂಜಾನೆ 2 ರವರೆಗೆ ಮತ್ತು 16 ರಿಂದ 18 ರವರೆಗೆ ಬೆಳಗ್ಗೆ 5:30 ರಿಂದ ಮುಂಜಾನೆ 2 ರವರೆಗೆ ಕಾರ್ಯಾಚರಿಸಲಿದೆ .
ಟ್ರಾಮ್ ಗುರುವಾರ ಬೆಳಗ್ಗೆ 6 ರಿಂದ ಮುಂಜಾನೆ 1 ಗಂಟೆ ವರೆಗೆ ಮತ್ತು ಶುಕ್ರವಾರದಂದು ಬೆಳಗ್ಗೆ 9 ರಿಂದ 1 ರವರೆಗೆ ಕೆಲಸ ಮಾಡಲಿದೆ.
ಸಾರ್ವಜನಿಕ ಬಸ್ ಸೇವೆ:
ಗೋಲ್ಡ್ ಸೂಕ್ ಬಸ್ ನಿಲ್ದಾಣವು ಬೆಳಗ್ಗೆ 5.14 ರಿಂದ ಮುಂಜಾನೆ 12.59 ರವರೆಗೆ ಮತ್ತು ಗುಬೈಬ ಬಸ್ ನಿಲ್ದಾಣವು 4.46 ರಿಂದ ಮುಂಜಾನೆ 12.33 ರವರೆಗೆ , ಸತ್ವಾ ನಿಲ್ದಾಣವು ಬೆಳಗ್ಗೆ 5 ರಿಂದ ರಾತ್ರಿ 11.59 ರವರೆಗೆ ತೆರೆಯಲಿದೆ. ಸಿ 01 ಮಾರ್ಗವು 24 ಗಂಟೆಗಳ ಕಾಲ ಕಾರ್ಯಾಚರಿಸಲಿದೆ. ಕಿಸೈಸ್ ಸ್ಟೇಷನ್ ಬೆಳಗ್ಗೆ 5 ರಿಂದ ಅರ್ಥ ರಾತ್ರಿ ವರೆಗೆ ಅಲ್ ಖೂಸ್ ವ್ಯವಹಾರ ಕೇಂದ್ರ ಬಸ್ ನಿಲ್ದಾಣವು ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆ ವರೆಗೆ, ಜಬಲ್ ಅಲಿ ನಿಲ್ದಾಣವು ಬೆಳಗ್ಗೆ 5 ರಿಂದ ರಾತ್ರಿ 11.30 ರವರೆಗೆ ಕಾರ್ಯನಿರ್ವಹಿಸಲಿದೆ.