janadhvani

Kannada Online News Paper

ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ನೇತಾರರಿಂದ ರೋಲಾ ಸೆಕ್ಟರ್ ಕಾರ್ಯಕರ್ತರಿಗೆ ಅಭಿನಂದನೆ

ಶಾರ್ಜಾ :– ಕೆಸಿಎಫ್ ಸಂಘಟನಾ ಸದಸತ್ವ ಅಭಿಯಾನದ ಭಾಗವಾಗಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಕೆಸಿಎಫ್ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ನೇತಾರರು ಅಭಿನಂದಿಸಿದರು.

ಸೆಕ್ಟರ್ ಅಧ್ಯಕ್ಷರಾದ ನಿಝಾಮುದ್ದೀನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ , ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಕೌಂಸಿಲ್ ನೇತಾರರನ್ನೊಳಗೊಂಡ ಸರ್ವರನ್ನು ಸ್ವಾಗತಿಸಿದರು. ಮತ್ತು ಸೆಕ್ಟರ್ ವತಿಯಿಂದ ಹೂ ಗುಚ್ಛವನ್ನು ನೀಡಿ ಸ್ವಾಗತಿಸಲಾಯಿತು.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕೆಸಿಎಫ್ ಸದಸತ್ವ ಅಭಿಯಾನದ ಭಾಗವಾಗಿ ಯುಎಯಿಯಲ್ಲಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ನಡೆಸಿದ ಸದಸ್ಯತ್ವ ಅಭಿಯಾನ ರಾಷ್ಟ್ರೀಯ ಮಟ್ಟದಲ್ಲಿ ನೇತಾರರ ಪ್ರಶಂಸೆಗೆ ಪಾತ್ರವಾಗಿ, ಅಭಿನಂಧಿಸಲೆಂದೇ ಹಿರಿಯ ಸಂಘಟನಾ ನೇತಾರರು ಬೇಟಿ ಕೊಟ್ಟಿರುವುದು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ.
IC ಪ್ರಧಾನ ಕಾರ್ದರ್ಶಿ PH ಅಬ್ಧುಲ್ ಹಮೀದ್, ಅಬ್ಧುಲ್ ಹಮೀದ್ ಸ‌ಅದಿ ಈಶ್ವರಮಮಂಗಿಲ, ಅಬ್ಧುಲ್ ಕರೀಂ ಮುಸ್ಲಿಯಾರ್ ಕರಾಯ, ರಾಷ್ಟ್ರೀಯ ನೇತಾರರಾದ kh ಮುಹಮ್ಮದ್ ಕುಂಞಿ ಸಖಾಫಿ, ಅಬ್ಧುಲ್ ಹಕೀಂ ತುರ್ಕಳಿಕೆ, ಇಬ್ರಾಹಿಂ ಹಾಜಿ ಬ್ರೈಟ್, ಅಬ್ಧುಲ್ಲ ಹಾಜಿ ನಲ್ಕ, ಅಬೂಸ್ವಾಲಿಹ್ ಸಖಾಫಿ ಇನೋಳಿ, ಶಾರ್ಝಾ ಝೋನ್ ಅಧ್ಯಕ್ಷರಾದ ಮುಹಮ್ಮದ್ ರಫೀಖ್ ಮುಸ್ಲಿಯಾರ್ ತೆಕ್ಕಾರ್, ಶರೀಫ್ ಸಾಲೆತ್ತೂರು, ತಾಜುದ್ದೀನ್ ಅಮ್ಮುಂಜೆ, ಅಬ್ಧುಲ್ ರಹಿಮಾನ್ ಉಳ್ಳಾಲ ಮೊದಲಾದ ನೇತಾರರು ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಅಭಿನಂದಿಸಿ ಪುರಸ್ಕರಿಸಿದರು.