ಬೆಂಗಳೂರು :ಸುನ್ನಿ ಸ್ಟೂಡೆಂಟ್ ಫೆಡೆರೇಶನ್ ( SSF) ರಾಷ್ಟ್ರದಾದ್ಯಂತ ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಸಾಹಿತ್ಯೋತ್ಸವದ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವವು ನವೆಂಬರ್ 9 10. ರಂದು ಬ್ಯಾರಿ ಸೌಹಾರ್ದ ಭವನ ಎಚ್ ಬಿ ಆರ್ ಲೇಔಟ್ ಕಮ್ಮನಹಳ್ಳಿ ಬೆಂಗಳೂರಿನಲ್ಲಿ ನಡೆಯಲಿದೆ .ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ವ್ಯಾಪ್ತಿಯ 7 ಡಿವಿಷನ್ ಗಳಿಂದ ಆಯ್ಕೆಯಾದ ಸುಮಾರು 800 ರಷ್ಟು ಅಧಿಕ ಸ್ಪರ್ಧಾರ್ಥಿಗಳು ,5 ವಿಭಾಗಗಳಾಗಿ 120 ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಸ್ಪರ್ದಿಸಲಿದ್ದಾರೆ .6 ಕ್ಕೂ ಅಧಿಕ ಆಕರ್ಷಕ ವಿವಿಧ ವೇದಿಕೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ .ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಬರಹಗಾರರಾದ ಕೇಶವ ಮಲಗಿ ,
ಮಾಜಿ ಸಚಿವರಾದ ಸಿ ಎಂ ಇಬ್ರಾಹಿಂ ,ಇಬ್ರಾಹಿಂ ಬಾಫಖಿ ತಂಙಳ್, ಶೌಕತಲೀ ತಂಙಳ್, ಜಾಫರ್ ಅಹ್ಮದ್ ನೂರಾನಿ, ಅನಸ್ ಸಿದ್ದೀಖಿ ಶಿರಿಯ ಹಾಗೂ ಪ್ರಮುಖ ಸಾದಾತುಗಳು ,ಉಲಮಾ ,ಉಮರಾ ನೇತಾರರು , ಸಂಘಟನಾ ನಾಯಕರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ .