ಮೊಂಟಪದವು:ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ 4ನೇ ಆಂಡ್-ಅನುಸ್ಮರಣೆಯ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಆಗಸ್ಟ್ 22,23,24 ದಿನಾಂಕಗಳಲ್ಲಿ ಮರಿಕ್ಕಳ ಮಸ್ಜಿದ್ ವಠಾರದಲ್ಲಿ ನಡೆಯಿತು.
ಆಗಸ್ಟ್ 22 ಗುರುವಾರ ರಾತ್ರಿ 7:00 ಗಂಟೆಗೆ ಸಯ್ಯಿದ್ ಕಾಜೂರು ತಂಙಳ್ ಉಧ್ಘಾಟಿಸಿದ ಕಾರ್ಯಕ್ರಮದಲ್ಲಿ ನೌಫಲ್ ಸಖಾಫಿ ಕಳಸ ಪ್ರಭಾಷಣಗೈದರು. ಆಗಸ್ಟ್ 23 ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ ಊದ್ ತಂಙಳ್ ದುಆ:ಗೈದ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಪ್ರಭಾಷಣಗೈದರು.
ಆಗಸ್ಟ್ 24 ಶನಿವಾರ ಬೆಳಿಗ್ಗೆ ಇಶಾಅತುಸ್ಸುನ್ನ: ಬೇಕಲ್ ಸಂಘಟನೆಯ ಸಹಭಾಗಿತ್ವದಲ್ಲಿ ಉಲಮಾ ಸಂಗಮ ನಡೆಯಿತು.ಅಬ್ದುಲ್ ಜಲೀಲ್ ಸಖಾಫಿ ಚೆರ್ಶೋಲ ಉಸ್ತಾದರು ಸಮಗ್ರ ತರಗತಿ ನಡೆಸಿದರು.ಆಗಸ್ಟ್ 24 ಶನಿವಾರ ರಾತ್ರಿ 6:00 ಗಂಟೆಗೆ ತಾಜುಲ್ ಫುಖಾಹಾಅ್ ಬೇಕಲ್ ಉಸ್ತಾದರ ಆಂಡ್-ಅನುಸ್ಮರಣೆ ಸಮಾರೋಪ ಕಾರ್ಯಕ್ರಮದಲ್ಲಿ ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಸ್ವಾಗತ ಭಾಷಣ ಮಾಡಿದರು. ಮರಿಕ್ಕಳ ಜಮಾಅತ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು..ಜಮಾಅತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಅಧ್ಯಕ್ಷತೆ ವಹಿಸಿದ್ದರು..ಕಾರ್ಯಕ್ರಮದಲ್ಲಿ ಕೆಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಸಯ್ಯಿದ್ ಆದೂರು ತಂಙಳ್ ,ಸಯ್ಯಿದ್ ತಲಕಿ ತಂಖಳ್,ಡಾ!ಮಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ , ಸಯ್ಯಿದ್ ಶರಪುದ್ದೀನ್ ತಂಙಳ್ ಪರೀದ್ ನಗರ, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಸಯ್ಯಿದ್ ಮುಷ್ತಾಖುರ್ರಹ್ಮಾನ್ ತಂಙಳ್ ಚಟ್ಟಕ್ಕಳ್ ,ಸಯ್ಯಿದ್ ಯು.ಪಿ.ಎಸ್ ತಂಙಳ್ ಬೇಕಲ್,ಸಯ್ಯಿದ್ ಪೂಕುಂಞಿ ತಂಙಳ್ ಉದ್ಯಾವರ,ಸ್ಪೀಕರ್ ಯು.ಟಿ.ಖಾದರ್,ಯು.ಟಿ ಇಫ್ತಿಕಾರ್ ಅಲಿ,, ಎಚ್.ಎಚ.ಅಮೀನ್, ಕಣಚೂರು ಮೋನು ಹಾಜಿ ,ನಾಸಿರ್ ಲಕ್ಕಿಸ್ಟಾರ್,ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ,ಅಬ್ದುರ್ರಹ್ಮಾನ್ ಮದನಿ ಮೂಳೂರು,ಹಫೀಳ್ ಸಅದಿ ಕೊಡಗು,ಹಾಫಿಳ್ ಸುಫ್ಯಾನ್ ಸಖಾಫಿ ,ಅಬ್ದುರ್ರಹ್ಮಾನ್ ಮದನಿ ಜೆಪ್ಪು,ಇಸ್ಹಾಕ್ ಝುಹ್ರಿ ಸೂರಿಂಜೆ,ಮಹಮ್ಮದಲಿ ಸಖಾಫಿ ಅಶ್ಅರಿಯ್ಯಾ,ಮಹಮ್ಮದ್ ಕುಂಞಿ ಅಂಜದಿ ಅಲ್ ಮದೀನಾ,ಮುನೀರ್ ಸಖಾಫಿ ಉಳ್ಳಾಲ,ಮಹಮ್ಮದ್ ಮದನಿ ಸಾಮಾಣಿಗೆ,ಎನ್ ಎಸ್ ಕರೀಂ,ನವಾಝ್ ನರಿಂಗಾನ,,ಮೊದಲಾದ ಧಾರ್ಮಿಕ, ರಾಜಕೀಯ , ಸಾಮಾಜಿಕ ನಾಯಕರು ಭಾಗವಹಿಸಿದರು.ಕೊನೆಗೆ ಜಮಾಅತ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ವಂದಿಸಿದರು.