ಉತ್ತರ ಕೇರಳದ ಉನ್ನತ ಧಾರ್ಮಿಕ ಲೌಕಿಕ ಶಿಕ್ಷಣ ಸಮುಚ್ಚಯ ಜಾಮಿಅ ಸಅದಿಯ್ಯಾ ಇದರ ಐವತ್ತೈದನೇ ವಾರ್ಷಿಕ ಸಮ್ಮೇಳನ ನವೆಂಬರ್ ತಿಂಗಳಲ್ಲಿ ಕಾಸರಗೋಡು ದೇಳಿ ಸಅದಿಯ್ಯಾ ಸಭಾಂಗಣದಲ್ಲಿ ನಡೆಯಲಿದ್ದು,ಅದರ ಪ್ರಚಾರ ಸಮಾವೇಶ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮರ್ಹೂಂ ಖುರ್ರತುಸ್ಸಾದಾತ್ ಕೂರಾ ತಂಙಳ್ ರವರ ಸಂಸ್ಮರಣೆಯು ಆಗಸ್ಟ್ 13 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಪಂಪ್ವೆಲ್ ನಲ್ಲಿ ಉನ್ನತ ಉಲಮಾ,ಉಮರಾ ನೇತೃತ್ವದಲ್ಲಿ ನಡೆಯಲಿದೆ.
ಪ್ರಸ್ತುತ ಸಮಾವೇಶದಲ್ಲಿ ಜಿಲ್ಲೆಯ ಸುನ್ನೀ ಸಂಘ ಕುಟುಂಬದ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಕರೆ ನೀಡಿದೆ ಎಂದು ಪ್ರಧಾನ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಕೊಳ್ತಿಗೆ ಅಬ್ದುಲ್ ಅಝೀಝ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸೇರಿದ ಕಾರ್ಯಕಾರಿಣಿ ಸಭೆಯನ್ನು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಪಾಡಿ ಉದ್ಘಾಟಿಸಿದರು.
ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ರವರನ್ನು ಈ ಸಂದರ್ಭ ಶಾಲು ಹೊದಿಸಿ ಗೌರವಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷ ಅಲ್ ಮದೀನಾ ಅಬ್ದುಲ್ ಖಾದರ್ ಸಖಾಫಿ, ಅಶ್ರಫ್ ಸಖಾಫಿ ಸವಣೂರು ಶುಭ ಹಾರೈಸಿ ಮಾತನಾಡಿದರು,ಜಿಲ್ಲಾ ಉಪಾಧ್ಯಕ್ಷ ಶಾಫಿ ಸಖಾಫಿ ಕೊಕ್ಕಡ,ಕೋಶಾಧಿಕಾರಿ ಅಬ್ದುಸ್ಸತ್ತಾರ್ ಸಖಾಫಿ ಬೆಳ್ಳಾರೆ, ರಾಜ್ಯ ಸಮಿತಿ ಕಾರ್ಯದರ್ಶಿ ಮುಸ್ತಫಾ ಸಖಾಫಿ ಬೇಂಗಿಲ, ಅಬೂಸ್ವಾಲಿಹ್ ಸಖಾಫಿ ಬೆಳ್ಮ,ಇಬ್ರಾಹೀಂ ಸಖಾಫಿ ಕಬಕ,ಅತಾವುಲ್ಲಾಹ್ ಸಖಾಫಿ ಕುಪ್ಪೆಟ್ಟಿ,ಕಾಸಿಂ ಸಖಾಫಿ ಅಳಕೆಮಜಲು,ಅಬ್ದುಲ್ ಖಾದರ್ ಸಖಾಫಿ ಕಡಂಬು ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಪರಪ್ಪು ಕೊನೆಯಲ್ಲಿ ವಂದಿಸಿದರು.