1 ರಿಂದ 7 ನೇ ತರಗತಿಗೆ ನೇಮಕಾತಿಯಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಾಲೆಯಲ್ಲಿ ಹಲವು ವರುಷ ಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದನ್ನು ವಿರೋಧಿಸಿ ಹಾಗೂ ಈ ಹಿಂದಿನಂತೆ ಮುಖ್ಯ ಗುರುಗಳ ಹುದ್ದೆ , ಪ್ರೌಢ ಶಾಲೆಗೆ ಭಡ್ತಿ ನೀಡುತ್ತಿರುವುದನ್ನು ಮುಂದುವರಿಸುವ ಕುರಿತು ಶಿಕ್ಷಕರು ಹೋರಾಟಕ್ಕೆ ಕರೆ ಕೊಟ್ಟಿದ್ದು ಅವರ ನ್ಯಾಯಯುತ ಹೋರಾಟಕ್ಕೆ ಸರಕಾರ ಕೂಡಲೇ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ SM. ನೆಲ್ಯಾಡಿ ಈ ಮೂಲಕ ಸರಕಾರವನ್ನ ಒತ್ತಾಯಿಸಿದ್ದಾರೆ.
ಸರಕಾರಿ ಶಾಲೆಯ ಸಮಯದಲ್ಲಿ ಶಾಲೆಯಿಂದ ಹೊರಗೆ ನಿಂತು ಮಕ್ಕಳ ಕಲಿಕೆಗೆ ಅಡ್ಡಿ ಉಂಟು ಮಾಡುವ ಶಿಕ್ಷಕ ವೃಂದಕ್ಕೆ ಧಿಕ್ಕಾರವಿರಲಿ.
ಅದೇ ರೀತಿ ಶಿಕ್ಷಕರ ಸಮಯ ಪರಿಪಾಲನೆಯ ಉಸ್ತುವಾರಿ ನೋಡಬೇಕಾದ ಎಸ್ಡಿಎಂಸಿ ಗೆ ಸಂಭಂದಿಸಿದವರು ಮಕ್ಕಳ ಶಿಕ್ಷಣದ ಕಾಳಜಿ ಇಲ್ಲದೆ ಇಂತಹ ಸಂದೇಶ ಬಿತ್ತರಿಸುವುದು ಲಜ್ಜಾಹೀನ ನಡೆ.
ಇಂತವರು ಮಕ್ಕಳ ಪರವಾಗಿ ಎಂದೂ ನಿಲ್ಲಲಾರರು,ಇವರು ಏನಿದ್ದರೂ ಸೂಟ್ ಕೇಸ್ ಗಾಗಿ ಇರುವವರು