ಜಿದ್ದಾ: ರಂಝಾನಿನ ಕೊನೆಯಹತ್ತು ಆಗಮನದೊಂದಿಗೆ, ಮಕ್ಕಾ ಮತ್ತು ಮದೀನಾದ ಹೋಟೆಲ್‌ಗಳ ಬಾಡಿಗೆಯು ಗಣನೀಯವಾಗಿ ಹೆಚ್ಚಳವಾಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಯಾತ್ರಿಕರ ಸಂಖ್ಯೆ ಹೆಚ್ಚಳವಾಗ ತೊಡಗಿದಾದ ಹೋಟೆಲ್‌ಗಳು ತಮ್ಮ ಬಾಡಿಗೆಯನ್ನು 50 ಶೇ. ಹೆಚ್ಚಳಗೊಳಿಸಿದೆ.
ಮಕ್ಕಾದಲ್ಲಿನ ಮಸ್ಜಿದ್ ಹರಮ್‌ನ ಬಳಿ ಇರುವ ಕೊಠಡಿಗಳು ಕನಿಷ್ಠ ಒಂದು ದಿನಕ್ಕೆ 800 ರಿಯಾಲ್ ಗಳಿಗೆ ಬಾಡಿಗೆಯನ್ನು ಏರಿಸಿದೆ. ಮಸ್ಜಿದುಲ್ ಹರಂಗೆ ನಡೆದು ಹೋಗಬಹುದಾದ ದೂರದಲ್ಲಿರುವ ಮಧ್ಯಮ ಹೋಟೆಲ್ ಬಾಡಿಯು ಸುಮಾರು 1,500 ರಿಯಾಲ್ ಆಗಿದೆ. ಮುಂಚಿತವಾಗಿ ಗೊತ್ತುಪಡಿಸಿದವರಿಗೆ ಹೊರತುಪಡಿಸಿ, ಈದುಲ್ ಫಿತರ್ ದಿನದವರೆಗೆ ಹೋಟೆಲ್ ನಲ್ಲಿ ಯಾವುದೇ ಕೊಠಡಿ ಲಭ್ಯವಿಲ್ಲ. ಅದೇ ವೇಳೆ, ಹರಂ ಸುತ್ತ ಮುತ್ತಲ ಹೋಟೆಲ್ ಗಳಲ್ಲಿ ಶೇ. 40ರಷ್ಟು ಕೊಠಡಿಗಳು ಕಾಲಿ ಉಳಿದಿದೆ ಎನ್ನಲಾಗಿದೆ.
ಕೊನೆಯ ಹತ್ತು ದಿನಗಳಲ್ಲಿ, ಪ್ಯಾಕೇಜ್ ನಲ್ಲಿ ಇಫ್ತಾರ್, ಭೋಜನ ಮತ್ತು ಸೌಕರ್ಯಗಳು ಸೇರಿ 29,000 ರಿಯಾಲ್ ದರವನ್ನು ಪಾವತಿಸಬೇಕಿದೆ.
ಸೌದಿ ಪ್ರವಾಸೋದ್ಯಮ ಇಲಾಖೆಯ ಅನುಮತಿ ಇರುವ 1,200 ಹೋಟೆಲ್ ಗಳು ಮಕ್ಜಾದಲ್ಲಿದೆ.ಇಲ್ಲಿ 90,000 ಕೋಣೆಗಳಲ್ಲಿ ಬಹುಪಾಲು ಬುಕಿಂಗ್ ಪೂರ್ಣಗೊಂಡಿದೆ. ಒಂದೇ ಸಮಯದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಯಾತ್ರಿಕರು ಇಲ್ಲಿ ನೆಲೆಸಬಹುದಾಗಿದೆ. ರಂಝಾನ್ ಕೊನೆಯ ಹತ್ತು ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚಿನ ಯಾತ್ರಿಕರು ಮಕಾವನ್ನು ಭೇಟಿ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ