janadhvani

Kannada Online News Paper

ಮಕ್ಕಾ ಮತ್ತು ಮದೀನಾದ ಹೋಟೆಲ್‌ಗಳ ಬಾಡಿಗೆ ಹೆಚ್ಚಳ

ಜಿದ್ದಾ: ರಂಝಾನಿನ ಕೊನೆಯಹತ್ತು ಆಗಮನದೊಂದಿಗೆ, ಮಕ್ಕಾ ಮತ್ತು ಮದೀನಾದ ಹೋಟೆಲ್‌ಗಳ ಬಾಡಿಗೆಯು ಗಣನೀಯವಾಗಿ ಹೆಚ್ಚಳವಾಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಯಾತ್ರಿಕರ ಸಂಖ್ಯೆ ಹೆಚ್ಚಳವಾಗ ತೊಡಗಿದಾದ ಹೋಟೆಲ್‌ಗಳು ತಮ್ಮ ಬಾಡಿಗೆಯನ್ನು 50 ಶೇ. ಹೆಚ್ಚಳಗೊಳಿಸಿದೆ.

ಮಕ್ಕಾದಲ್ಲಿನ ಮಸ್ಜಿದ್ ಹರಮ್‌ನ ಬಳಿ ಇರುವ ಕೊಠಡಿಗಳು ಕನಿಷ್ಠ ಒಂದು ದಿನಕ್ಕೆ 800 ರಿಯಾಲ್ ಗಳಿಗೆ ಬಾಡಿಗೆಯನ್ನು ಏರಿಸಿದೆ. ಮಸ್ಜಿದುಲ್ ಹರಂಗೆ ನಡೆದು ಹೋಗಬಹುದಾದ ದೂರದಲ್ಲಿರುವ ಮಧ್ಯಮ ಹೋಟೆಲ್ ಬಾಡಿಯು ಸುಮಾರು 1,500 ರಿಯಾಲ್ ಆಗಿದೆ. ಮುಂಚಿತವಾಗಿ ಗೊತ್ತುಪಡಿಸಿದವರಿಗೆ ಹೊರತುಪಡಿಸಿ, ಈದುಲ್ ಫಿತರ್ ದಿನದವರೆಗೆ ಹೋಟೆಲ್ ನಲ್ಲಿ ಯಾವುದೇ ಕೊಠಡಿ ಲಭ್ಯವಿಲ್ಲ. ಅದೇ ವೇಳೆ, ಹರಂ ಸುತ್ತ ಮುತ್ತಲ ಹೋಟೆಲ್ ಗಳಲ್ಲಿ ಶೇ. 40ರಷ್ಟು ಕೊಠಡಿಗಳು ಕಾಲಿ ಉಳಿದಿದೆ ಎನ್ನಲಾಗಿದೆ.

ಕೊನೆಯ ಹತ್ತು ದಿನಗಳಲ್ಲಿ, ಪ್ಯಾಕೇಜ್ ನಲ್ಲಿ ಇಫ್ತಾರ್, ಭೋಜನ ಮತ್ತು ಸೌಕರ್ಯಗಳು ಸೇರಿ 29,000 ರಿಯಾಲ್ ದರವನ್ನು ಪಾವತಿಸಬೇಕಿದೆ.
ಸೌದಿ ಪ್ರವಾಸೋದ್ಯಮ ಇಲಾಖೆಯ ಅನುಮತಿ ಇರುವ 1,200 ಹೋಟೆಲ್ ಗಳು ಮಕ್ಜಾದಲ್ಲಿದೆ.ಇಲ್ಲಿ 90,000 ಕೋಣೆಗಳಲ್ಲಿ ಬಹುಪಾಲು ಬುಕಿಂಗ್ ಪೂರ್ಣಗೊಂಡಿದೆ. ಒಂದೇ ಸಮಯದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಯಾತ್ರಿಕರು ಇಲ್ಲಿ ನೆಲೆಸಬಹುದಾಗಿದೆ. ರಂಝಾನ್ ಕೊನೆಯ ಹತ್ತು ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚಿನ ಯಾತ್ರಿಕರು ಮಕಾವನ್ನು ಭೇಟಿ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

error: Content is protected !! Not allowed copy content from janadhvani.com