janadhvani

Kannada Online News Paper

ಧಾರ್ಮಿಕ ವಿದ್ಯೆಯ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕಾಗಿದೆ- ಉಪ್ಪಳ್ಳಿ ತಂಙಳ್

ಚಿಕ್ಕಮಗಳೂರು: ಮನುಷ್ಯನು, ಮನುಷ್ಯನಾಗಿ ಜೀವನ ಸಾಗಿಸಬೇಕಾಗದರೆ ಅವನಿಗೆ ಧಾರ್ಮಿಕ ವಿದ್ಯೆಯು ಅತೀ ಅಗತ್ಯವಾಗಿದ್ದು, ಅದು ಸಣ್ಣ ಪ್ರಾಯದಿಂದಲೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅವರಿಗೆ ಧಾರ್ಮಿಕ ವಿದ್ಯೆಯು ಕಡ್ಡಾಯವಾದೆ. ಈ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕು ಎಂದು ಅಸ್ಸಯ್ಯಿದ್ ಎ.ಪಿ.ಎಸ್. ಹುಸೈನ್ ಆಟಕೋಯ ತಂಙಳ್ ಉಪ್ಪಳ್ಳಿ ಅಭಿಪ್ರಾಯ ಪಟ್ಟರು.

ಅವರು ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿ ಅಲ್-ಜಮಾಲಿಯ್ಯಃ ಮದ್ರಸದ ನೂತನ ಕಛೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಕಾಲಘಟ್ಟದ ಮಕ್ಕಳಲ್ಲಿ ಸಣ್ಣ ಪ್ರಾಯದಿಂದಲೇ ಅನಿಸ್ಲಾಮಿಕ ಚಟುವಟಿಕೆಗಳು ಕಂಡು ಬರುತ್ತಿರುವುದು ಬಹಳ ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಇವುಗಳ ಕುರಿತಾದ ಅರಿವು ನೀಡಬೇಕಾದರೆ ಮದ್ರಸ ವಿದ್ಯಾಭ್ಯಾಸದ ಅನಿವಾರ್ಯತೆ ಬಹಳ ಅಗತ್ಯವೆಂದು ಅವರು ಹೇಳಿದರು.

ಸಭಾ ಕಾರ್ಯಕ್ರಮವನ್ನು ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಷ್ ಇಸ್ಮಾಯಿಲ್ ಸಅದಿ ಉರುಮಣೆ ಉದ್ಘಾಟಿಸಿ, ಸಂಘ ಸಂಸ್ಥೆಗಳು ಸುಸೂತ್ರವಾಗಿ ಕಾರ್ಯಾಚರಣೆ ಮಾಡಬೇಕಾದರೆ ಕಛೇರಿಗಳು ಅತೀ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕ್ಯಾಲಿಕಟ್ ಮುಹಮ್ಮದ್ ಬಾಸಿತ್ ಅಹ್ಸನಿ ರವರು ವಿಶೇಷ ಹಿತವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಳ್ಳಿ ಶಾಧುಲಿ ಜುಮಾ ಮಸೀದಿಯ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಯು.ಎಚ್. ವಹಿಸಿದರು. ಅಸ್ಸಯ್ಯಿದ್ ಸ್ವಾಲಿಹ್ ತಂಙಳ್ ಉಪ್ಪಳ್ಳಿ ವಿಶೇಷ ಪ್ರಾರ್ಥನೆ ನಡೆಸಿದರು.

ಜಮಾಅತ್ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಯೂಸುಫ್ ಹಾಜಿ ಉಪ್ಪಳ್ಳಿ, ಪ್ರ.ಕಾರ್ಯದರ್ಶಿ ಸಿದ್ದೀಖ್ ಎಸ್.ಎಂ.ಕೆ.ಟಿ, ಕೋಶಾಧಿಕಾರಿ ಸಿ.ಎಂ. ಅಕ್ಬರ್ ಅಲಿ, ಕರ್ನಾಟಕ ಮುಸ್ಲಿಂ ಜಮಾಅತ್ ಚಿಕ್ಕಮಗಳೂರು ಸರ್ಕಲ್ ಅಧ್ಯಕ್ಷರಾದ ಶೈಖ್ ಅಹ್ಮದ್, ಯೂನಿಟ್ ಅಬ್ದುರ್ರಝಾಖ್ (ಮೂಸಾ), ಬದ್ರಿಯಾ ಮದ್ರಸ ಮುಖ್ಯೋಪಾಧ್ಯಾಯರಾದ ಜಮಾಲುದ್ದೀನ್ ನಈಮಿ, ಆಡಳಿತ ಸಮಿತಿ ನಾಯಕರಾದ ಫಾರೂಖ್ ಮುಸ್ಲಿಯಾರ್ ಮಳಲಿ, ಸಿ.ಆರ್. ಫಾರೂಖ್ ಹಾಜಿ, ಖಲಂದರಿಯ ಧಫ್ ಕಮಿಟಿ ಅಧ್ಯಕ್ಷರಾದ ಶಹೀರ್, ಚಿಕ್ಕಮಗಳೂರು ನಗರ ಸಭೆ ಮಾಜಿ ಕೌನ್ಸಿಲರ್ ಬದ್ರುದ್ದೀನ್, ಮದ್ರಸ ಅಧ್ಯಾಪಕರಾದ ತೌಫೀನ್ ಫಾಳಿಲಿ ಮಂಜೇಶ್ವರ, ನಾಸಿರುದ್ದೀನ್ ಸಖಾಫಿ ಪರಪ್ಪು, ಅಬ್ದುಲ್ ಜಲೀಲ್ ಸಅದಿ ಮೂರುಗೋಳಿ, ಶಿಹಾಬುದ್ದೀನ್ ಜೌಹರಿ ಕೆ.ಸಿ.ರೋಡು, ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್ ಪ್ರ.ಕಾರ್ಯದರ್ಶಿ ತಮೀಮ್ ಪಿ.ಜೆ. ಮೊದಲಾದವರು ಉಪಸ್ಥಿತರಿದ್ದರು.

ಉಪ್ಪಳ್ಳಿ ಮದ್ರಸ ಮುಖ್ಯೋಪಾಧ್ಯಾಯರಾದ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಸ್ವಾಗತಿಸಿ, ಚಿಕ್ಕಮಗಳೂರು ರೇಂಜ್ ಪ್ರ.ಕಾರ್ಯದರ್ಶಿ ಅಬ್ದುನ್ನಾಸಿರ್ ಮುಈನಿ ಸರಳಿಕಟ್ಟೆ ವಂದಿಸಿದರು. ಮದ್ರಸ ಅಧ್ಯಾಪಕರಾದ ಜಮಾಲುದ್ದೀನ್ ಹುಮೈದಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com