janadhvani

Kannada Online News Paper

ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರಿಗೆ ಅಲ್ ಖೈದಾ ಬೆದರಿಕೆ

ರಿಯಾದ್ : ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರ ಅವರಿಗೆ ಅಲ್ ಖೈದಾ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ. ದೇಶದಲ್ಲಿ ಅವರ ಸಾರಥ್ಯದಲ್ಲಿ ನಡೆಯುವ ಪರಿಷ್ಕೃತ ಕ್ರಮಗಳಿಂದಾಗಿ ಈ ಬೆದರಿಕೆ ಎನ್ನಲಾಗಿದೆ. ಅರೇಬಿಯನ್ ಉಪ ದ್ವೀಪದಲ್ಲಿ ಕಾರ್ಯಾಚರಿಸುವ ಅಲ್ ಖೈದಾ ಗುಂಪಾದ  ಆಖಾಫ್ ಮುಹಮ್ಮದ್ ಬಿನ್ ಸಲ್ಮಾನ್‌ರ ವಿರುದ್ದ ಹೇಳಿಕೆ ನೀಡಿದೆ.

ಸೌದಿ ಅರೇಬಿಯಾದಲ್ಲಿ ಅನೈತಿಕ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಭಯೋತ್ಪಾದಕ ಸಂಘಟನೆ ಹೇಳಿದೆ. ಮುಹಮ್ಮದ್ ಬಿನ್ ಸಲ್ಮಾನ್, ಧಾರ್ಮಿಕ ಕೇಂದ್ರಗಳಿಗೆ ಬದಲಾಗಿ ಸಿನೇಮಾ ಮಂದಿರಗಳನ್ನು ನಿರ್ಮಿಸುತ್ತಿದ್ದಾರೆ. ಆಧ್ಯಾತ್ಮಿಕ ಪುಸ್ತಕಗಳ ಬದಲಿಗೆ ಪೂರ್ವ ಮತ್ತು ಪಾಶ್ಚಿಮಾತ್ಯರಾದ ಜಾತ್ಯತೀತವಾದಿಗಳ ಮತ್ತು ನಾಸ್ತಿಕರ ಅಸಂಬದ್ಧಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.

ಮುಹಮ್ಮದ್ ಬಿನ್ ಸಲ್ಮಾನ್ ನಿರ್ದೇಶನದಡಿಯಲ್ಲಿ, ಚಲನಚಿತ್ರ ಮಂದಿರಗಳಿಗೆ ಅನುಮತಿ ಮತ್ತು ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿಗಳನ್ನು ನೀಡಲಾಗಿದೆ.

error: Content is protected !! Not allowed copy content from janadhvani.com