ಅಪರಾಧಿಗಳಿಗೆ ತೊಂಬತ್ತಲ್ಲ ಮೂವತ್ತು ದಿನಗಳಲ್ಲಿ ಶಿಕ್ಷೆ ನೀಡುವ ನ್ಯಾಯವ್ಯವಸ್ಥೆಯು ಜಾರಿಗೆ ಬರುವುದಾದರೆ ಅದು ಸ್ವಾಗತಾರ್ಹ. ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯೂ ಇದೆ.
ಆದರೆ ಅದು ಕೋಮು ಆಧಾರಿತವಾಗಿರಕೂಡದು. ನಿರ್ದಿಷ್ಠ ಕೋಮಿನ ಆರೋಪಿಗಳಿಗೆ ಮಾತ್ರ ಶೀಘ್ರ ಶಿಕ್ಷೆ ಹಾಗೂ ಮಿಕ್ಕಿದವರಿಗೆ ಅದರಿಂದ ವಿನಾಯಿತಿ ನೀಡುವ ಪ್ರಸ್ತಾಪವು ಮುನ್ನಲೆಗೆ ಬರುವುದು ನ್ಯಾಯೋಚಿತವಲ್ಲ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಅಭಿಪ್ರಾಯಪಟ್ಟಿದೆ.
ಹುಬ್ಬಳ್ಳಿಯ ನೇಹಾ ಕೊಲೆಯು ಖಂಡನಾರ್ಹ. ಆದರೆ ಆ ವಿಚಾರದಲ್ಲಿ ಶೀಘ್ರ ಶಿಕ್ಷೆ ಎಂಬ ರಾಜ್ಯ ಕಾಂಗ್ರೇಸ್ ನ ಉಸ್ತುವಾರಿ ನಾಯಕರೊಬ್ಬರ ಹೇಳಿಕೆಯು ತೀವ್ರ ಬಾಲಿಶ ವಾದುದು ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಲಿಂ ಜಮಾಅತ್ ಶೀಘ್ತ ನ್ಯಾಯ ವಿಲೇವಾರಿಯು ದೇಶದ ಎಲ್ಲ ನಾಗರಿಕರಿಗೂ ಒಂದೇ ರೀತಿಯಲ್ಲಿರಬೇಕೆ ಹೊರತು ಧರ್ಮಾದಾರಿತವಾಗಿರಕೂಡದೆಂದು ಆಗ್ರಹಿಸಿದೆ.
ನ್ಯಾಯಾಂಗ ಪ್ರಕ್ರಿಯೆ ಯು ತಮ್ಮ ನಿಯಂತ್ರಣದಲ್ಲಿದೆಯೆಂಬಂತೆ ಹೇಳಿ ಕೆ ಕೊಡುವ ಮೂಲಕ ಕಾನೂನು ಪ್ರಕ್ರಿಯೆಗಳಿಗೆ ಅಪಚಾರ ಎಸಗುವವ ರ ಬಗ್ಗೆ ಪಕ್ಷ ವು ಎಚ್ಚರ ದಲ್ಲಿರಬೇಕು. ಎಲ್ಲರಿಗೂ ಸಮಾನ ನ್ಯಾಯದ ಪರಿಕಲ್ಪನೆಯನ್ನು ಪ್ರತಿಪಾದಿಸುವ ಕಾಂಗ್ರೇಸ್ ಪಕ್ಷದ ಜಬಾಬ್ದಾರಿಯುತ ನಾಯಕರಿಂದ ಈ ರೀತಿಯ ಬೇಜವಾಬ್ದಾರಿಯುತ ಹೇಳಿಕೆಯು ಬಂದಿರುವುದು ದುರದೃಷ್ಟಕರ ಎಂದು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸಿರುವ ಈ ಮೇಲ್ ಸಂದೇಶದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ತಿಳಿಸಿದೆ.