janadhvani

Kannada Online News Paper

ಅರ್ಹತೆಗೆ ಸಂದ ಗೌರವ- ಪೆರುವಾಯಿ ತಂಙಳ್ ರಿಗೆ ಹೋಲಿ ಖುರ್‌ಆನ್ ಪುರಸ್ಕಾರ

ತಂಙಳ್ ರವರ ಈ ಸೇವೆಗಾಗಿ ಮೈಮನ್ ಅಕಾಡೆಮಿ ಹಾಗೂ ವಿಸ್ಡಮ್ ವರ್ಲ್ಡ್ ಪ್ರೀ ಸ್ಕೂಲ್ ನೆಟ್ವರ್ಕ್ ಕರ್ನಾಟಕ ಸಂಸ್ಥೆಯು ತನ್ನ ಆರನೇ ವಾರ್ಷಿಕ ಪ್ರಯುಕ್ತ ಹೋಲಿ ಖುರ್‌ಆನ್ ಪುರಸ್ಕಾರ ನೀಡಿ ತಂಙಳ್ ರವರನ್ನು ಗೌರವಿಸುತ್ತಿದೆ.

✍️ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಖುರ್‌ಆನ್ ವ್ಯಾಖ್ಯಾನ ತಿಳಿಯುವುದು ಅಷ್ಟು ಸುಲಭವಲ್ಲ. ಅದನ್ನು ಅರ್ಥಮಾಡಿಕೊಳ್ಳಲು ಅರಬಿ ವ್ಯಾಕರಣ ಗಳ ಮೇಲೆ ಹಿಡಿತವಿರಬೇಕು. ಸಮಯ,ಸಂದರ್ಭದಲ್ಲಿ ಅವತೀರ್ಣ ಗೊಂಡ ಖುರ್‌ಆನ್ ಅರ್ಥೈಸಲು ತಫ್ಸೀರ್ ಗ್ರಂಥಗಳ ಸಹಾಯ ಅಗತ್ಯ ವಿದೆ.

ತಫ್ಸೀರ್ ಗ್ರಂಥಗಳನ್ನು ಹೊರಗಿಟ್ಟು ಖುರ್‌ಆನ್ ವ್ಯಾಖ್ಯಾನ ಗ್ರಹಿಸಲು ಸಾಧ್ಯವಿಲ್ಲ. ಹೀಗಿರುವಾಗ “ಖುರ್‌ಆನ್ ಕಲಿಯಿರಿ” ಎಂಬ ಹೆಸರಿನಲ್ಲಿ ಖುರ್‌ಆನ್ ವ್ಯಾಖ್ಯಾನ ಹೊರತಂದ ನೂತನ ವಾದಿಗಳು,ತಮ್ಮ ಸಿದ್ಧಾಂತ ಪ್ರಚಾರಕ್ಕಾಗಿ ತಮಗೆ ಅಗತ್ಯವಾದ ಭಾಗಗಳನ್ನು ದುರ್ವ್ಯಾಖ್ಯಾನ ಮಾಡಿ ಜನರನ್ನು ವಂಚಿಸಲು ಪ್ರಯತ್ನ ಪಟ್ಟಿದ್ದರು.

ನೂತನ ವಾದಿಗಳ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ನೈಜತೆಯನ್ನು ತಿಳಿಸುವ ಸಮೃದ್ಧ ವಾದ ಕನ್ನಡ ಖುರ್‌ಆನ್ ವ್ಯಾಖ್ಯಾನ ಗ್ರಂಥ ಅಗತ್ಯ ಎಂಬ ಕೂಗು ಕೇಳಿ ಬಂದಿತ್ತು. ಸಮುದಾಯದ ಈ ಬೇಡಿಕೆಗೆ ಧ್ವನಿಯಾದವರು ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಪೆರುವಾಯಿ. ಹಲವಾರು ತಫ್ಸೀರ್ ಗ್ರಂಥಗಳನ್ನು ಬಳಸಿ ಖುರ್‌ಆನ್ ಕನ್ನಡನುವಾದವನ್ನು ಹೊರ ತಂದು ಸಮುದಾಯ ಎದುರಿಸುವ ಕೊರತೆಯೊಂದನ್ನು ನೀಗಿಸಿದ್ದರು.

ತಂಙಳ್ ರವರ ಈ ಸೇವೆಗಾಗಿ ಮೈಮನ್ ಅಕಾಡೆಮಿ ಹಾಗೂ ವಿಸ್ಡಮ್ ವರ್ಲ್ಡ್ ಪ್ರೀ ಸ್ಕೂಲ್ ನೆಟ್ವರ್ಕ್ ಕರ್ನಾಟಕ ಸಂಸ್ಥೆಯು ತನ್ನ ಆರನೇ ವಾರ್ಷಿಕ ಪ್ರಯುಕ್ತ ಹೋಲಿ ಖುರ್‌ಆನ್ ಪುರಸ್ಕಾರ ನೀಡಿ ತಂಙಳ್ ರವರನ್ನು ಗೌರವಿಸುತ್ತಿದೆ.

ಹಲವಾರು ಉಪಯುಕ್ತ ಕನ್ನಡ ಪುಸ್ತಕಗಳನ್ನು ಹೊರ ತಂದಿರುವ ತಂಙಳ್ ರವರು ಈ ಪುರಸ್ಕಾರಕ್ಕೆ ಸೂಕ್ತ ಮತ್ತು ಅರ್ಹ ಆಯ್ಕೆ ಯಾಗಿದ್ದಾರೆ.

ಮೈಮನ್ ಅಕಾಡೆಮಿಯೂ ಕಳೆದ ಆರು ವರ್ಷಗಳಲ್ಲಿ ವಿವಿಧ ರೀತಿಯಲ್ಲಿ ಸಮುದಾಯಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮಿಕ ಲೇಪನವನ್ನು ಹಚ್ಚುತ್ತಿದೆ. ವಿಸ್ದಮ್ ಹೆಸರಿನಲ್ಲಿ ಪ್ರೀ ಸ್ಕೂಲ್ ಮಾಡಿ ಉನ್ನತ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಿ ಯಶಸ್ಸಿ ಕಂಡಿದೆ. ಆನ್‌ಲೈನ್ ಮದ್ರಸ,LCD ಸಹಿತ ಮಯ್ಯತ್ ಪರಿ ಪಾಲನೆ ತರಗತಿ,ಮಹಿಳೆಯರಿಗಾಗಿ ಫಿಕ್ಹ್ ಮಸ್‌ಅಲ ಹಾಗೂ ನಪೀಸತ್ ಮಾಲೆ, ಖುರ್‌ಆನ್ ತಜ್ವೀದ್ ಅನುಸಾರ ಓದಲು ಹಾಗೂ ಅಗತ್ಯ ಭಾಗಗಳ ವ್ಯಾಖ್ಯಾನ ಕಲಿಯುವ ವ್ಯವಸ್ಥೆ ಹೀಗೆ,ಹಲವು ವಿಧದ ಕೋರ್ಸ್ ಗಳನ್ನು ಕೈಗೆಟಕುವ ವೆಚ್ಚದಲ್ಲಿ ಸಮುದಾಯದ ಮಡಿಲಿಗೆ ಹಾಕಿ ಕೊಟ್ಟ ಕೀರ್ತಿ ಮೈಮನ್ ಅಕಾಡೆಮಿಯದ್ದು. ಮಿತ್ರ ಸಿದ್ದೀಖ್ ಮದನಿ ಮೆದು ನಡೆಸುವ ಈ ಶಿಕ್ಷಣ ಸಂಸ್ಥೆ ಬೆಳೆದು ಹೆಮ್ಮರವಾಗಿ ನಿಲ್ಲಲಿ.

error: Content is protected !! Not allowed copy content from janadhvani.com