janadhvani

Kannada Online News Paper

ಮೋದಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಜಗಜ್ಜಾಹೀರು: ನೂತನ ವೆಬ್‌ಸೈಟ್ ವೈರಲ್- ಬಿಜೆಪಿ ಪಾಳಯದಲ್ಲಿ ನಡುಕ

ಇಂಗ್ಲಿಷ್ ಅಕ್ಷರ ಮಾಲೆಯ A to Z ರೂಪದಲ್ಲಿ ಪ್ರತೀ ಅಕ್ಷರಕ್ಕೆ ಅನುಗುಣವಾಗಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮರೆಮಾಚಲು ಇಡಿ ಯನ್ನು ದುರುಪಯೋಗಪಡಿಸಿ ವಿಪಕ್ಷ ನಾಯಕರನ್ನು ಬೆನ್ನಟ್ಟುತ್ತಿರುವ ಬಿಜೆಪಿ ಪಾಳಯದಲ್ಲಿ ಇದೀಗ ನಡುಕ ಉಂಟಾಗಿದೆ.

ಮುಖಪುಟದಲ್ಲಿ ನರೇಂದ್ರ ಮೋದಿಯವರಿಗೆ 2000 ರೂ.ಕರೆನ್ಸಿಯ ಡ್ರೆಸ್ ನ್ನು ಧರಿಸಿರುವ ಫೋಟೋದೊಂದಿಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತವಿರುವ ಬಿಜೆಪಿ ನಾಯಕರ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ವಿವರಿಸುತ್ತಿರುವ www.corruptmodi.com ಎಂಬ ಹೊಸ ವೆಬ್‌ಸೈಟ್ ಒಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಚಾರಗೊಂಡಿದೆ.

ಇಂಗ್ಲಿಷ್ ಅಕ್ಷರ ಮಾಲೆಯ A to Z ರೂಪದಲ್ಲಿ ಪ್ರತೀ ಅಕ್ಷರಕ್ಕೆ ಅನುಗುಣವಾಗಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಗಿದೆ. ಲಿಂಕ್ ಓಪನ್ ಮಾಡಿದರೆ ಕಂಡುಬರುವ ಇಂಗ್ಲೀಷ್ ಅಕ್ಷರಮಾಲೆಯ ಯಾವುದೇ ಒಂದು ಅಕ್ಷರವನ್ನು ಮುಟ್ಟಿದರೆ ಆ ಅಕ್ಷರದಿಂದ ಆರಂಭವಾಗುವ ಭ್ರಷ್ಟಾಚಾರದ ವಿವರಣೆ ಲಭಿಸಲಿದೆ.
https://corruptmodi.com

error: Content is protected !! Not allowed copy content from janadhvani.com