janadhvani

Kannada Online News Paper

KCF ಒಮಾನ್: “ಮುಜಾಲಸ 2023” ಮೂರನೇ ಹಂತದ ನಾಯಕತ್ವ ತರಬೇತಿ ಶಿಬಿರ

ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್, ಸಂಘಟನಾ ವಿಭಾಗದ ವತಿಯಿಂದ ಮೂರನೇ ಹಂತದ ಮುಜಾಲಸ ತರಬೇತಿ ಶಿಬಿರವು ನೂರ್ ಅಲ್ ಅಮ್ರೀನ್ ಫಾರ್ಮ್ ಹೌಸ್ ನಲ್ಲಿ ಪೆಬ್ರವರಿ 23 ರಂದು ನಡೆಯಿತು. ಜುಮಾ ನಮಾಝಿನ ಬಳಿಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸೈಯಿದ್ ಆಬಿದ್ ಅಲ್ ಹೈದ್ರೋಸಿ ತಂಗಳ್ ದುಆಕ್ಕೆ ನೇತೃತ್ವ ನೀಡಿದರು.

ಕಾರ್ಯಕ್ರಮವನ್ನು ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷರಾದ ಉಬೈದುಲ್ಲಾ ಸಖಾಫಿ ಮಿತ್ತೂರು ಉದ್ಘಾಟಿಸಿದರು. ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿ ಜನಾಬ್ ಆರಿಫ್ ಕೊಡಿ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ನಾಯಕರಾದ ಇಕ್ಬಾಲ್ ಬರ್ಕ, ಹಂಝ ಹಾಜಿ ಕನ್ನಂಗಾರ್, ಇಬ್ರಾಹಿಮ್ ಹಾಜಿ ಅತ್ರಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತರಬೇತುದಾರರಾದ ಉಮರ್ ಸಖಾಫಿ ಎಡಪ್ಪಾಲ ರವರು ನಾಯಕರಾಗಲಿರುವ ಅಂಶಗಳು, ವ್ಯಕ್ತಿತ್ವ ವಿಕಸನ ಹಾಗೂ ಸಂಘಟನೆ ಬಗ್ಗೆ ಸವಿಸ್ತಾರವಾಗಿ ವಿವರಿಸಿ ನುಕೈಬ್ ಗಳಿಗೆ ಮನದಟ್ಟು ಮಾಡಿಕೊಟ್ಟರು ಹಾಗೂ ತಮ್ಮ ಅಧೀನದಲ್ಲಿ ಬರುವ ನಿಖಾಬ್ ರವರುಗಳನ್ನು ಸೇರಿಸಿ ಕೊಂಡು ಸಂಘಟನೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡಯ್ಯಲು ಸಹಕರಿಸಬೇಕೆಂದು ವಿನಂತಿಸಿದರು.

ಕೆಸಿಎಫ್ ಒಮಾನ್ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ ಕೆಸಿಎಫ್ ಐಸಿ ದಶಮಾನೋತ್ಸವದ ಭಾಗವಾದ ಡಿಸೇನಿಯಂ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು, ಝೋನ್ ನಾಯಕರು, ನಕೀಬ್ ರವರುಗಳು ಹಾಗೂ ನುಖೈಬ್ ರವರುಗಳು ಉಪಸ್ಥಿತರಿದ್ದರು.

ಕೆಸಿಎಫ್ ಒಮಾನ್ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com