ಡಿ.ಕೆ.ಎಸ್.ಸಿ. ಶಿಫಾ (ರಿಯಾದ್) ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 15-02-2024ರ ಗುರುವಾರ ಅಸ್ತ ಶುಕ್ರವಾರ ರಾತ್ರಿ ಸಮಿತಿಯ ಕಾರ್ಯದರ್ಶಿ ಜನಾಬ್ ಹುಝೈಫ ಪೆರಾಜೆ ಇವರ ಶಿಫಾದಲ್ಲಿರುವ ನಿವಾಸದಲ್ಲಿ
ಶರೀಫ್ ತೋಕೂರು ರವರ ಅಧ್ಯಕ್ಷತೆಯಲ್ಲಿ ಜರುಗಿತು.
ರಝಾಕ್ ಉಸ್ತಾದ್ ಮಾಚಾರ್ ಇವರ ದುಆದ ಮೂಲಕ ಶುಭಾರಂಭಗೊಂಡ ಸಭೆಯಲ್ಲಿ ಹಾಫಿಳ್ ಖಿಯಾರ್ ಅಹ್ಮದ್ ರಹ್ಮೀ ಖಿರಾಅತ್ ಪಾರಾಯಣಗೈದು, ಖಲೀಲ್ ಝುಹ್‌ರಿ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಹುಝೈಫ ಪೆರಾಜೆ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರವನ್ನು ಪಡೆದುಕೊಂಡರು.
ರಿಯಾದ್ ಝೋನ್ ಕಾರ್ಯದರ್ಶಿ ಜನಾಬ್ ಅಬ್ದುರ್ರಹ್ಮಾನ್ ಸುಲೈಮಾನ್ ವರ ನೇತೃತ್ವದಲ್ಲಿ 2024-2025ರ ಸಾಲಿಗೆ ಈ ಕೆಳಗಿ ಸುದೃಢವಾದ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಹಮೀದ್ ಮಡಂತಿಲ, ಪ್ರಧಾನ ಕಾರ್ಯದರ್ಶಿಯಾಗಿ ರಶೀದ್ ಕಕ್ಕಿಂಜೆ, ಕೋಶಾಧಿಕಾರಿಯಾಗಿ ಹಮೀದ್ ಮಠ, ಉಪಾದ್ಯಕ್ಷರುಗಳಾಗಿ ರಝಾಕ್ ಉಸ್ತಾದ್ ಮಾಚಾರ್ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಅನ್ಸಾರ್ ಚಾರ್ಮಾಡಿ, ಸಲಹೆಗಾರರಾಗಿ ಶರೀಫ್ ತೋಕೂರು, ಯೂಸುಫ್ ಕಳಂಜಿಬೈಲ್, ಹನೀಫ್ ಉಸ್ತಾದ್ ಬೆಳ್ಳಾರೆ, ಹಮೀದ್ ಮುಲ್ಕಿ ಸಂಚಾಲಕರಾಗಿ ಶಾಕಿರ್ ಕಬಕ, ಉನೈಸ್ ಪಾಟ್ರಕೋಡಿ, ಆಯ್ಕೆಗೊಂಡರು.
ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಹಾಜರಿದ್ದ ಡಾ| ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ, ಅಬ್ದುಲ್ ಅಝೀಝ್ ಬಜ್ಪೆ, ಇಸ್ಮಾಯಿಲ್ ಕನ್ನಂಗಾರ್, ಅಝೀಝ್ ಕಾಟಿಪಳ್ಳ, ಯೂಸುಫ್ ಕಳಂಜಿಬೈಲ್, ಹಮೀದ್ ಮುಲ್ಕಿ ಮತ್ತು ರವೂಫ್ ಸುಳ್ಯ ಇವರು ಮಾತನಾಡಿ ನೂತನ ಸಭೆಗೆ ಶುಭಹಾರೈಸಿದರು.
ನೂತನ ಸಮಿತಿಗೆ ಆಯ್ಕೆಗೊಂಡ ಅಧ್ಯಕ್ಪ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿಗಳಾದ ಹಮೀದ್ ಮಡಂತಿಲ, ರಶೀದ್ ಕಕ್ಕಿಂಜೆ, ಹಮೀದ್ ಮಠ ಸಭಿಕರನ್ನುದ್ದೇಶಿಸಿ ಮಾತನಾಡಿ ಮುಂದಿನ ವರ್ಷದಲ್ಲಿ ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮ ನಿರ್ವಹಣೆಯ ಭರವಸೆಯನಿತ್ತರು.ನೂತನ ಕಾರ್ಯದರ್ಶಿ ರಶೀದ್ ಕಕ್ಕಿಂಜೆ ಧನ್ಯವಾದಗೈದರು.