janadhvani

Kannada Online News Paper

SYS ಮತ್ತು SSF ಹೂಹಾಕುವಕಲ್ಲು ಶಾಖಾ ವತಿಯಿಂದ ರಮಳಾನ್ ಕಿಟ್ ವಿತರಣೆ

SYS ಮತ್ತು SSF ಹೂಹಾಕುವಕಲ್ಲು ಶಾಖಾ ವತಿಯಿಂದ ಇಂದು “ರಮಳಾನ್ ಕಿಟ್ ವಿತರಣಾ” ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಬಿ.ಜೆ.ಎಂ ಹೂಹಾಕುವಕಲ್ಲು ಖತೀಬರಾದ ಬಹು! ರಫೀಕ್ ಅಹ್ಸನಿ ಕಕ್ಕೆಪದವು ಉಸ್ತಾದರು ಉದ್ಘಾಟಿಸಿದರು.

ವೇದಿಕೆಯಲ್ಲಿ ಎಸ್.ವೈ,ಎಸ್ ಅಧ್ಯಕ್ಷರಾದ ಮೊಯಿದಿನ್ ಕೆ ತೋಟಾಲ್, SSF ಶಾಖಾದ್ಯಕ್ಷರಾದ ಹಮೀದ್ ತೋಟಾಲ್, ಕೆ.ಸಿ.ಎಫ್ ಕಾರ್ಯಕಾರ್ಯರಾದ ಇಬ್ರಾಹಿಂ ಖಲೀಲ್ ,ಉಳ್ಳಾಲ ಡಿವಿಷನ್ ಸದಸ್ಯರಾದ ಅಜೀಜ್ ಎಚ್.ಕಲ್ಲು, ಶಾಖಾ ನಾಯಕರಾದ, ಹಮೀದ್ ಕಿಲಾರಿ, ಉಸ್ಮಾನ್ ಎನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸರಳ ಸಮಾರಂಭದಲ್ಲಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಿಟ್ ಗಳನ್ನು ಅರ್ಹರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೂಹಾಕುವಕಲ್ಲು ಶಾಖೆಯು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಈ ಸಾಂತ್ವನ ಯೋಜನೆಯು ಸಾರ್ವಜನಿಕ ವಲಯದಿಂದ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !! Not allowed copy content from janadhvani.com