janadhvani

Kannada Online News Paper

ಸೌದಿ ಅರೇಬಿಯಾದ ಒಂದು ರಿಯಾಲ್ ನೋಟು ಅಮಾನ್ಯ

ರಿಯಾದ್: ಸೌದಿ ಅರೇಬಿಯಾದ ಹಣಕಾಸು ಪ್ರಾಧಿಕಾರವು ಒಂದು ರಿಯಾಲ್ ನೋಟನ್ನು ಹಂತಹಂತವಾಗಿ ಹಿಂದಕ್ಕೆ ಪಡೆಯಲಾಗುವುದು ಎಂದು ಘೋಷಿಸಿದೆ.

ನಾಣ್ಯಗಳನ್ನು ವ್ಯಾಪಕಗೊಳಿಸುವ ಭಾಗವಾಗಿ ಒಂದು ರಿಯಾಲ್ ನೋಟನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತದೆ.

ಕಳೆದ ಗುರುವಾರವೇ ಇದು ಜಾರಿಗೆ ಬಂದಿದ್ದು,.ಬ್ಯಾಂಕ್‌ಗಳಲ್ಲಿ ನೋಟುಗಳಿಗೆ ಬದಲಾಗಿ ನಾಣ್ಯವನ್ನು ವಿತರಿಸಲಾಗುತ್ತಿದೆ.ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನೋಟುಗಳು ಸಂಪೂರ್ಣವಾಗಿ ಬ್ಯಾಂಕುಗಳಿಗೆ ಹಿಂತಿರುಗುವ ತನಕ ನಿರ್ದಿಷ್ಟ ಅವಧಿಗೆ ನೋಟುಗಳು ಮತ್ತು ನಾಣ್ಯಗಳನ್ನು ವಿನಿಮಯ ಮಾಡಲು ಅನುಮತಿ ಇದೆ.

ಉತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ಸುಂದರವಾಗಿ ವಿನ್ಯಾಸಗೊಳಿಸಲಾದ ನಾಣ್ಯಗಳನ್ನು ಮಾರುಕಟ್ಟೆಗೆ ತರಲಾಗಿದೆ.

ದೊರೆ ಸಲ್ಮಾನ್ ಆಡಳಿತ ವಹಿಸಿಕೊಂಡ ಬಳಿಕ ಇದು ಆರನೇ ಬಾರಿಗೆ ನಾಣ್ಯಗಳನ್ನು ಹೊರತರಲಾಗುತ್ತಿದೆ.ಒಂದು ಹಲಾಲ, ಐದು ಹಲಾಲ, ಹತ್ತು ಹಲಾಲ, ಇಪ್ಪತ್ತೈದು ಹಲಾಲ, ಐವತ್ತು ಹಲಾಲ, ಒಂದು ರಿಯಾಲ್ ಮತ್ತು ಎರಡು ರಿಯಾಲ್ ನಾಣ್ಯಗಳನ್ನು ಹೊರತರಲಾಗಿದೆ.

ಸೌದಿಯಲ್ಲಿ ಚಲಾವಣೆಯಲ್ಲಿರುವ ನೋಟುಗಳಲ್ಲಿ ಶೇ 49 ರಷ್ಟು ಒಂದು ರಿಯಾಲ್ ನೋಟೇ ಆಗಿದೆ.ಒಂದು ರಿಯಾಲ್ ನೊಟುಗಳು ಬೇಗನೆ ಹಾನಿಯಾಗುವುದನ್ನು ತಡೆಯಲು ನಾಣ್ಯಗಳನ್ನು  ವ್ಯಾಪಕ ಗೊಳಿಸುವುದರಿಂದ ಸಾಧ್ಯ ಎಂದು ನಿರೀಕ್ಷಿಸಲಾಗಿದೆ.

error: Content is protected !! Not allowed copy content from janadhvani.com