ಕೊಲ್ನಾಡು ಸೆರ್ಕಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಇದರ ವತಿಯಿಂದ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 27 ನೇ ರಕ್ತದಾನ ಶಿಬಿರವು ದಿನಾಂಕ 10-12-2023 ರಂದು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಸೆರ್ಕಳದಲ್ಲಿ ನಡೆಸಲಾಯಿತು.
ಈ ರಕ್ತದಾನ ಶಿಬಿರದಲ್ಲಿ 57 ಶಿಬಿರಾರ್ಥಿಗಳು ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಕಾರ್ಯಕ್ರಮವನ್ನು ಕೊಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಅವರ ಅಧ್ಯಕ್ಷತೆಯಲ್ಲಿ, ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ ಗೌರವಧ್ಯಕ್ಷರಾದ ಯಂ. ಎಸ್ ಮಹಮ್ಮದ್, ದ.ಕ. ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಬ್ಬಾಸ್ ಅಲಿ, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರು ಪ್ರಕಾಶ್ ಶೆಟ್ಟಿ , ಯೂತ್ ಕಾಂಗ್ರೆಸ್ ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷರಾದ ಇಬ್ರಾಹೀಂ ನವಾಝ್ , ಗ್ರಾಮ ಪಂಚಾಯತ್ ಸದಸ್ಯರಾದ ಎ.ಬಿ ಅಬ್ದುಲ್ಲಾ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಾರಾಯಣ ಶೆಟ್ಟಿ ಕುಲ್ಯಾರ್, ಪರ್ತಿಪ್ಪಾಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಹಕೀಂ ಪರ್ತಿಪ್ಪಾಡಿ , ಖಲಂದರ್ ಪರ್ತಿಪ್ಪಾಡಿ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಜಿಲ್ಲಾ ಇದರ ಅಧ್ಯಕ್ಷರಾದ ಝಕರಿಯಾ ನಾರ್ಶ , ಸಲಹೆಗಾರರಾದ ಲತೀಫ್ ಪರ್ತಿಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್ ಸುರಿಬೈಲ್, ರಝಾಕ್ ಸಿ.ಹೆಚ್, ಎಸ್.ಎಮ್.ಎ ಬಂಟ್ವಾಳ ಝೋನ್ ಅಧ್ಯಕ್ಷರಾದ ಸಿ.ಹೆಚ್ ಅಬೂಬಕ್ಕರ್ , ಮಂಚಿ ಪ್ರೌಢ ಶಾಲಾ ಅಧ್ಯಕ್ಷರಾದ ಬಾಲಕೃಷ್ಣ ಸೆರ್ಕಳ, ಲಯನ್ಸ್ ಕ್ಲಬ್ ಚಾರ್ಟರ್ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್, ಲಯನ್ಸ್ ಕ್ಲಬ್ ಬಪ್ಪನಾಡು ವಲಯಾಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ವಲಯ ಕೋಶಾಧಿಕಾರಿ ಶಿವಪ್ರಸಾದ್ ಮುಲ್ಕಿ ಶಾಲಾ ಶಿಕ್ಷಕಿ ಸವಿತಾ, ಕೊಲ್ನಾಡು ವಲಯ ಕಾಂಗ್ರೆಸ್ ಉಪಾಧ್ಯಕ್ಷ ರಝಾಕ್ ಸುರಿಬೈಲ್, ಮಾಜಿ ಅಧ್ಯಕ್ಷರಾದ ನೆಬಿಸಾ ಖಾದರ್ , ಪಂಚಾಯತ್ ಸದಸ್ಯರಾದ ಜಯಂತಿ ಗೌಡ, ಯುವ ನ್ಯಾಯವಾದಿ ಗಝಲ್ ಕುಡ್ತಮೆಾಗರು, ಸೆರ್ಕಳ ಜುಮಾ ಮಸೀದಿಯ ಅಧ್ಯಕ್ಷರಾದ ಯೂಸುಫ್ ಬಾರೆಬೆಟ್ಟು, ಕಾರ್ಯದರ್ಶಿ ಇಂತಿಯಾಝ್ ಸೆರ್ಕಳ, ನೌಫಲ್ ಕೆ.ಬಿ.ಎಸ್, ಹಾಗೂ ಶರೀಫ್ ಕುಲ್ಯಾರ್ ಅತಿಥಿಗಳಾಗಿ ಭಾಗವಹಿಸಿದರು.
ಅಶ್ರಫ್ ಎಸ್.ಕೆ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಸಲಾಯಿತು. ಶಾಲಾಭಿವೃದ್ಧಿ ಸಮಿತಿ ಹಾಗೂ ತೇಜಸ್ವಿನಿ ಆಸ್ಪತ್ರೆಗೆ ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಜಿಲ್ಲಾ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ ಇವರು ಸ್ವಾಗತಿಸಿ ವಂದಿಸಿದರು.