ಉಡುಪಿ ಜಿಲ್ಲೆ ನೆಜಾರ್ ತೃಪ್ತಿ ಲೇಔಟ್ ಎಂಬಲ್ಲಿ ದಿನಾಂಕ 12- ನವೆಂಬರ್ 2023 ಬೆಳಿಗ್ಗೆ 8.30 ಕ್ಕೆ ದುಷ್ಕರ್ಮಿ ಮನೆಗೆ ನುಗ್ಗಿ ನೂರ್ ಮುಹಮ್ಮದ್ ಎಂಬುವರ ಪತ್ನಿ ಹಸೀನಾ,ಇಬ್ಬರು ಪುತ್ರಿ ಅಫ್ನನ್ ಹಾಗೂ ಅಯ್ನಾಝ್, ಪುತ್ರ ಅಸೀಮ್ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಹಾಗೂ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ.ತಪಿಸಿಕೊಂಡ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರಂತ ನಡೆದಿರುವುದಕ್ಕೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಹಾಗೂ ಸೆಂಟ್ರಲ್ ಕಮಿಟಿ ಕಂಬನಿ ಮಿಡಿದಿದೆ. ಈ ದುಷ್ಕರ್ತ್ಯವನ್ನು ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಾದಿಕರಿಗಳನ್ನು ಈ ಕಾರ್ಯಾಚರಣೆ ಭಾಗವಹಿಸಿದ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಗೃಹ ಇಲಾಖೆ ಕರ್ನಾಟಕ ಸರ್ಕಾರ, ಗೃಹ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಹಾಗೂ ಸೆಂಟ್ರಲ್ ಕಮಿಟಿ ಅಭಿನಂದಿಸಿದೆ.
ಹಾಗೂ ಈ ಕರ್ತ್ಯವೆಸಗಿದ ಆರೋಪಿಯನ್ನು ಕಾನೂನು ರೀತಿಯಲ್ಲಿ ತನಿಖೆ ಮಾಡಿ ಶಿಕ್ಷೆ ನೀಡಬೇಕು ಎಂಬುದಾಗಿ ಪೊಲೀಸ್ ಇಲಾಖೆಯನ್ನು ಮನವಿ ಮಾಡಿಕೊಂಡಿದೆ. ಈ ಘಟನೆಯು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ, ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಜಿಲ್ಲೆಯ ಜನತೆ ಭಯಭೀತರಾಗಿ ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರಕ್ಷಣೆ , ಕಾನೂನು ಹಾಗೂ ಸುವ್ಯವಸ್ಥೆಯನ್ನು ಹೆಚ್ಚಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತೇನೆ. ಈ ಘಟನೆಯಲ್ಲಿ ಮೃತ ಪಟ್ಟ ನಾಲ್ಕು ಮಂದಿಯ ಮರಣೋತ್ತರ ಪರೀಕ್ಷೆ ನಡೆಸಿದ ಕೆ. ಎಂ.ಸಿ ಮಣಿಪಾಲ ಆಸ್ಪತ್ರೆ, ಹಾಗೂ ಅಂತಿಮ ವಿಧಿವಿಧಾನ ನೆರವೇರಲು ಸೂಕ್ತ ರಕ್ಷಣೆ ವ್ಯವಸ್ಥೆ ನೆರವೇರಿಸಿ ಕೊಟ್ಟ ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಮಾದ್ಯಮವರನ್ನು, ಸಮಸ್ತ ನಾಗರಿಕರಿಗೆ ಧನ್ಯವಾದಗಳು. ಹಾಗೂ ಅಂತಿಮ ಕಾರ್ಯ ಸುಸೂತ್ರವಾಗಿ ನಡೆಯಲು ಸಹಕರಿಸಿದ ನೇಜಾರ್,ಕೊಡಿಬೆಂಗ್ರೆ,ಇಂದ್ರಾಳಿ, ಉಡುಪಿ ಜಾಮಿಯಾ ಮಸೀದಿಯ ಜಮಾತ್ ಆಡಳಿತ ಮಂಡಳಿಗೆ ದನ್ಯವದಾಗಳನ್ನು ಈ ಸಂದರ್ಭದಲ್ಲಿ ತಿಳಿಸುತ್ತೇನೆ ಎಂದರು.
ನಮ್ಮ ನಾಡ ಒಕ್ಕೂಟ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮದ್ ರಷದಿ, ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಹುಸೈನ್ ಹೈಕಾಡಿ, ಕುಂದಾಪುರ ತಾಲೂಕು ಅಧ್ಯಕ್ಷರಾದ ದಸ್ತಗೀರ ಸಾಹೇಬ್ ಕಂಡ್ಲೂರ್, ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರ್, ಸಮಾಜ ಸೇವಕ ಪೀರ್ ಸಾಹೇಬ್ ಉಡುಪಿ ಉಪಸಿತ್ದರಿದ್ದರು..