janadhvani

Kannada Online News Paper

ಶಾರ್ಜಾ ಕೆಸಿಎಫ್ ವತಿಯಿಂದ ನಾಳೆ ಬೃಹತ್ ಮೀಲಾದ್ ಸಮಾವೇಶ

ಶಾರ್ಜಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಶಾರ್ಜಾ ಪ್ರಾಂತ್ಯದ ಅಧೀನದಲ್ಲಿ ಅಕ್ಟೋಬರ್ 14 (ಶನಿವಾರ) ಸಂಜೆ 06:30 ಶಾರ್ಜಾ ಸಫಾರಿ ಮಾಲ್ ಮುವೈಲ ಸಭಾಂಗಣದಲ್ಲಿ ಬೃಹತ್ ಮೀಲಾದ್ ಸಮಾವೇಶ ನಡೆಯಲಿದೆ.

ಸಯ್ಯಿದ್ ಝೆನುದ್ದೀನ್ ಅಲ್ ಬುಖಾರಿ (ಕೂರಿ ಕುಝಿ ತಂಙಳ್) ಭಾಗವಹಿಸುವ ಕಾರ್ಯಕ್ರಮದಲ್ಲಿ
ಪ್ರಖ್ಯಾತ ಧಾರ್ಮಿಕ ವಿದ್ವಾಂಸ ನಾಸಿರುದ್ದೀನ್ ಸಖಾಫಿ ಕೋಟ್ಟಯಂ ಅವರು ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಸೈಯದ್ ತ್ವಾಹ ತಂಙಳ್ ಪೂಕೋಟೂರ್ ಬುರ್ದಾ ಅಲಾಪನೆ ಮತ್ತು ನಅತೆ ಶರೀಫ್ ಮಾಡಲಿದ್ದಾರೆ.
ಸುಮಾರು ಒಂದು ಸಾವಿರಕ್ಕೂ ಮಿಕ್ಕ ಕನ್ನಡಿಗರ ಬಾಗವಹಿಸುವಿಕೆಯನ್ನು ಅಂದಾಜಿಸಲಾಗಿದೆ. ಎಂದು ಸಂಘಟಕರು ತಿಳಿಸಿದ್ದಾರೆ.