ಮಂಗಳೂರು: ಇತ್ತೀಚೆಗೆ ಬಿಜೆಪಿ ನಾಯಕ ಬಸವನ ಗೌಡ ಪಾಟೀಲ್ ಯತ್ನಾಳ್ ಹಾವೇರಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತುಂಬಾ ಭಾವನಾತ್ಮಕವಾಗಿ ಹೇಳಿಕೆ ನೀಡಿ ರಾಜ್ಯಕ್ಕೆ ಬುಲ್ಡೋಜರ್ ಬರಲಿದೆ ಆ ಸ್ಥಾನವನ್ನು ನಾನೇ ಅಲಂಕರಿಸಲಿದ್ದೇನೆ ಎಂದಿರುವುದಕ್ಕೆ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಈ ಮಾತಿನೊಂದಿಗೆ ಈ ದೇಶದ, ಒಂದು ನಿರ್ಧಿಷ್ಟ ಜನ ಸಮುದಾಯವನ್ನು ಉದ್ದೇಶಿಸಿ ಮಾರ್ಮಿಕ ಮಾತುಗಳನ್ನು ಆಡಿದ್ದಾರೆ. ಈ ದೇಶದಲ್ಲಿ ಹುಟ್ಟಿ ಬೆಳದು ಈ ದೇಶದ ಮಣ್ಣಿಗೆ ಅಘಾದ ಕೊಡುಗೆ ನೀಡಿದ, ಒಂದು ಪರಿಗಣನಾತ್ಮಕ ಸಮುದಾಯವನ್ನು ತುಚ್ಛವಾಗಿ ಸಂಬೋಧಿಸಿದ್ದಾರೆ.
ಯತ್ನಾಳ್ ರಂತೆಯೇ ಇದಕ್ಕಿಂದ ಮೊದಲು ಅದೇ ಧಾಟಿಯಲ್ಲಿ ಮಾತನಾಡಿದ, ಸಂವಿಧಾನವನ್ನು ಬದಲಾಯಿಸುತ್ತೇವೆ, ಮತ್ತು ಒಂದು ನಿರ್ಧಿಷ್ಟ ಜನಸಮುದಾಯ ಮತ್ತು ಧರ್ಮವನ್ನು ಅವಹೇಳನ ಮಾಡಿದ ಯತ್ನಾಳ್ ರವರ ಸಮಕಾಲೀನ, ಕರ್ನಾಟಕದ ಉತ್ತರ ಕರಾವಳಿಯ ನಾಯಕರೊಬ್ಬರು ಇದೀಗ ಅನಿವಾರ್ಯ ಆಂಬುಲೆನ್ಸ್ ಸೇವೆಯನ್ನು ಅವಲಂಬಿಸಿರುವುದು ಖೇದಕರ.
ಅನ್ಯಧರ್ಮೀಯ ಮಹಿಳೆಯರ ಹಣೆಗೆ ತಿಲಕ ಇಡಲಿದ್ದೀವೆ,ಕರ್ನಾಟಕದ ಒಂದು ನಿರ್ಧಿಷ್ಟ ಧರ್ಮೀಯರ ಪ್ರತಿ ಮನೆಯಲ್ಲಿಯೂ ಮಹಿಳೆಯರ ಬುರ್ಕಾ ವಸ್ತ್ರ ಇರದಂತೆ ಮಾಡುತ್ತೇವೆ ಎಂದು ಬೊಬ್ಬಿರಿಸಿದ ಮಾತುಗಾರರ ಇತ್ತೀಚೆಗಿನ ಸ್ಥಿತಿ ಏನು ಎಂದು ಯತ್ನಾಳ್ ಅವರು ನೆನಪಿಡುವುದು ಉತ್ತಮ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.