ವಿಟ್ಲ: ಇಲ್ಲಿನ ಸರಕಾರಿ ಆಸ್ಪತ್ರೆಯು ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದೆ. ಮಾತ್ರವಲ್ಲದೆ ದಿನನಿತ್ಯನೂರಾರು ರೋಗಿಗಳು ಬರುತ್ತಿದ್ದರೂ ಕೂಡ ಆಸ್ಪತ್ರೆಯಲ್ಲಿ ಸರಿಯಾದ ಸರ್ಜನ್ ಡಾಕ್ಟರ್, ಸಿಸೇರಿಯನ್ ವ್ಯವಸ್ಥೆ ಇರೋದಿಲ್ಲ.
ಇದನ್ನು ಸರಿಪಡಿಸುವ ಉದ್ದೇಶದಿಂದ ವಿಟ್ಲದಲ್ಲಿ ಕಾರ್ಮಿಕ ಸಂಘಟನೆ, ದಲಿತ ಸೇವಾ ಸಮಿತಿ ಮತ್ತು ಖದ್ಮತ್ ಫೌಂಡೇಶನ್ ಮಂಗಳವಾರ ವಿಟ್ಲ ಪಂಚಮಿ ಹೋಟೆಲ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದೆ.
ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಮಾತನಾಡಿ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ವಿಟ್ಲ ಆಸ್ಪತ್ರೆಯ ಬಗ್ಗೆ ಕಾಳಜಿ ವಹಿಸದಿರುವುದು ಖೇದಕರವಾಗಿದೆ. ಬರುವ ನವೆಂಬರ್ 6 ತಾರೀಕಿನ ಒಳಗೆ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಆಸ್ಪತ್ರೆಯ ಎದುರುಗಡೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ವಿಟ್ಲ ಪರಿಸರದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ನ್ಯಾಯಯುತವಾಗಿ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಪುತ್ತೂರು ಶಾಸಕರಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಲಿತ ಸೇವಾ ಸಮಿತಿ ಮುಖಂಡರಾದ ಶೇಷಪ್ಪ ಬೆದರಕಾಡು ಮತ್ತು ಖಿದ್ಮತ್ ಫೌಂಡೇಶನ್ ವಿಟ್ಲ ಅಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ , SMA ವಿಟ್ಲ ರೀಜನಲ್ ಅಧ್ಯಕ್ಷರಾದ ಅಬ್ದುಲ್ ಹಕ್ಕಿಮ್ ಚಂದ್ರಶೇಖರ್ ಯು .ಗಣೇಶ್ ಸೀಗೆಬಲೆ ಉಪಸ್ಥಿತರಿದ್ದರು.