ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪುನಗರ ಕೊಡಂಗಾಯಿ ವಿದ್ಯಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆ ದಿನಾಂಕ ಸೆಪ್ಟಂಬರ್ 17 ರಂದು ಆದಿತ್ಯವಾರ ಸಂಸ್ಥೆಯಲ್ಲಿ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜರಗಲಿದೆ.
ಬೆಳಿಗ್ಗೆ 9.30 ಕೆ ಸರಿಯಾಗಿ ಸಂಸ್ಥೆಯ ಅಧ್ಯಕ್ಷರಾದ ಮಹಮೂದುಲ್ ಫೈಝಿ ( ವಾಲೆಮುಂಡೋವ್ ಉಸ್ತಾದ್) ಧ್ವಜಾರೋಹಣ ನಡೆಸಲಿದ್ದು 10 ಗಂಟೆಗೆ ಸಯ್ಯದ್ ಶಮೀಮ್ ತಂಙಳ್ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ ಮಕ್ ಬರ ಝಿಯಾರತ್ ಗೆ ನೇತೃತ್ವ ನೀಡಲಿದ್ದಾರೆ .10:30 ಕ್ಕೆ ಬುರ್ದಾ ಮಜ್ಲಿಸ್ ನಡೆಯಲಿದ್ದು 11 ಗಂಟೆಗೆ ಖತಮುಲ್ ಕುರ್ ಆನ್ ನಡೆಯಲಿದೆ.12 ಗಂಟೆಗೆ ಕಂಪ್ಯೂಟರ್ ಕೋರ್ಸ್ ಕಲಿತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ನಡೆಯಲಿದೆ.
12:15 ಕೆ ಅನುಸ್ಮರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಸಯ್ಯದ್ ಮುಕ್ತಾರ್ ತಂಙಳ್ ಕುಂಬೋಳ್, ಇಬ್ರಾಹೀಂ ಫೈಝಿ ಕನ್ಯಾನ ಉಸ್ತಾದ್,Dr. U.T ಇಫ್ತಿಕಾರ್, ಉಳ್ಳಾಲ ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ,ಮುಹಮ್ಮದಲಿ ಸಖಾಫಿ ಅಶ್ ಅರಿಯ,ಉಸ್ಮಾನ್ ಸಖಾಫಿ,ಖಾದರ್ ಫೈಝಿ ಹಾಗೂ ಹಲವು ಉಲಮಾ ಉಮಾರಾಗಳು ಮತ್ತು ರಾಜಕೀಯ ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನೀಡಲಾಗುವುದು.ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಪತ್ರಿಕಾ , ಹೇಳಿಕೆಯಲ್ಲಿ ತಿಳಿಸಿದ್ದಾರೆ.