ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿಯ ಅಧೀನದಲ್ಲಿ ಅಕ್ಟೋಬರ್ 2 ರಂದು ಮಧ್ಯಾಹ್ನ 2 ಘಂಟೆಗೆ ಮಂಗಳೂರಿನಲ್ಲಿ ವಿಜೃಂಭಣೆಯಿಂದ ಇಲಲ್ ಹಬೀಬ್ ಮೀಲಾದ್ ರ‍್ಯಾಲಿ ಹಾಗೂ ಪ್ರವಾದಿ ಸಂದೇಶ ಭಾಷಣ ನಡೆಸಲು ಇಂದು ಜಂಇಯ್ಯತುಲ್ ಉಲಮಾ ಕಛೇರಿಯಲ್ಲಿ ನಡೆದ ಸುನ್ನೀ ಸಂಘಟನೆಗಳ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಹಿರಿಯ ವಿದ್ವಾಂಸ ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷ ಬಶೀರ್ ಮದನಿ ಅಲ್ ಕಾಮಿಲ್ ಅಧ್ಯಕ್ಷತೆ ವಹಿಸಿದರು. ಎಸ್ ಎಸ್ ಎಫ್ ಜಿಲ್ಲಾ ಅಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು ಉದ್ಘಾಟಿಸಿದರು. ಮುಸ್ಲಿಂ ಜಮಾಅತಿನ ಅಶ್ರಫ್ ಕಿನಾರ, ಖಲೀಲ್ ಮಾಲಿಕಿ ಬೋಳಂತೂರು, ಎಸ್ ವೈ ಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪ್ರಿಂಟೆಕ್, ಎಸ್ ಎಸ್ ಎಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಸುಹೈಲ್ ಫರಂಗಿಪೇಟೆ, ಮಹಬೂಬ್ ಸಖಾಫಿ ಕಿನ್ಯ, ಮುಂತಾದವರು ಮಾತನಾಡಿದರು.ಎಸ್ ಎಸ್ ಎಫ್ ಜಿಲ್ಲಾ ಕೋಶಾಧಿಕಾರಿ ಇರ್ಶಾದ್ ಗೂಡಿನಬಳಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಮೀಲಾದ್ ರಾಲಿ ನಿರ್ವಹಣೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚೇರ್ ಮೇನ್ ಆಗಿ ಹಾಫಿಳ್ ಯಾಕೂಬ್ ಸಅದಿ ನಾವೂರು ಜನರಲ್ ಕನ್ವೀನರ್ ಆಗಿ ಅಶ್ರಫ್ ಕಿನಾರ ಮಂಗಳೂರು ಕೋಶಾಧಿಕಾರಿಯಾಗಿ ಅಜ್ಮಲ್ ಕಾವೂರು ಮೀಡಿಯಾ ಕನ್ವೀನರಾಗಿ ಶಾಕಿರ್ ಎಂಎಸ್ಸಿ ಬಜಪೆ ಹಾಗೂ ಸಮಿತಿ ಸದಸ್ಯರನ್ನಾಗಿ ಮುಸ್ಲಿಂ ಜಮಾಅತ್ ಜಿಲ್ಲಾ ಅಧ್ಯಕ್ಷ ಬಿ ಎಂ ಮುಮ್ತಾಜ್ ಅಲಿ, ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಖತರ್,ಎಸ್ ವೈ ಎಸ್ ಜಿಲ್ಲಾ ಅಧ್ಯಕ್ಷ ವಿ ಯು ಇಸ್ಹಾಕ್ ಝುಹ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೃಷ್ಣಾಪುರ ಎಸ್ ಎಸ್ ಎಫ್ ಜಿಲ್ಲಾ ಅಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು, ಪ್ರಧಾನ ಕಾರ್ಯದರ್ಶಿ ಸುಹೈಲ್ ಫರಂಗಿಪೇಟೆ, ಹಾಗೂ ಬಶೀರ್ ಹಾಜಿ ಮಿತ್ತಬೈಲು, ಬಿ ಎ ಅಬ್ದುಲ್ ಸಲೀಂ ಹಾಜಿ ಅಡ್ಯಾರ್ ಪದವು ಫಾರೂಕ್ ತಲಪಾಡಿ, ಬಶೀರ್ ಸಾಜಿಗಾರ್ ಮುಡಿಪು,
ಬದ್ರುದ್ದೀನ್ ಅಝ್ಹರಿ ಬಡಕಬೈಲು, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ಅಬ್ದುಲ್ ಜಬ್ಬಾರ್ ಕಣ್ಣೂರು, ಹಸನ್ ಪಾಂಡೇಶ್ವರ,ಇರ್ಶಾದ್ ಹಾಜಿ ಗೂಡಿನಬಳಿ, ನೌಸೀಫ್ ಪಂಜಿಮೊಗರು, ರವೂಫ್ ಹಿಮಮಿಯವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.