janadhvani

Kannada Online News Paper

SSF ಕೊಡಗು: ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ವಾಹನ ಸಂದೇಶ ಜಾಥಾ

ಕೊಡಗು: ಸೆಪ್ಟೆಂಬರ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ SSF 50ನೇ ವರ್ಷಾಚರಣೆ ಗೋಲ್ಡನ್ ಫಿಫ್ಟಿ ಐತಿಹಾಸಿಕ ಮಹಾ ಸಮ್ಮೇಳನದ ಪ್ರಚಾರಾರ್ಥ SSF ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಮಾದಕ ವ್ಯಸನದ ವಿರುದ್ಧ ಹಾಗೂ ಗೋಲ್ಡನ್ ಫಿಫ್ಟಿ ಸಂದೇಶ ವಾಹನ ಜಾಥಾ ನಡೆಯಿತು.

ಜಿಲ್ಲಾದ್ಯಕ್ಷರಾದ ಝುಬೈರ್ ಸಅದಿ ಉಸ್ತಾದರ ಪ್ರಾರ್ಥನೆಯೊಂದಿಗೆ ಪೊನ್ನಂಪೇಟೆ ಪಟ್ಟಣದಿಂದ‌ ಪ್ರಾರಂಭಗೊಂಡ ವಾಹನ ಜಾಥಾ ಗೋಣಿಕೊಪ್ಪ, ವಿರಾಜಪೇಟೆ, ಅಮ್ಮತ್ತಿ, ಪಾಲಿಬೆಟ್ಟ, ಸಿದ್ದಾಪುರ, ನೆಲ್ಯಹುದಿಕೇರಿ, ಕುಶಾಲನಗರ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಮಡಿಕೇರಿ, ಮೂರ್ನಾಡು, ಮಾರ್ಗವಾಗಿ ಬಂದ ವಾಹನ ಜಾಥಾ ನಾಪೋಕ್ಲುವಿನಲ್ಲಿ ಸಮಾಪ್ತಿಗೊಂಡಿತು.

ಈ ಎಲ್ಲಾ ಪಟ್ಟಣಗಳಲ್ಲಿಯೂ ಮಾದಕ ವ್ಯಸನದ ವಿರುದ್ಧ ಹಾಗೂ ಗೋಲ್ಡನ್ ಫಿಫ್ಟಿ ಸಮ್ಮೇಳನದ ಕುರಿತು ಭಾಷಣ ನಡೆಸಿದರು. ಭಾಷಣಗಾರರಾಗಿ… ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ವಿರಾಜಪೇಟೆ ಡಿವಿಷನ್ ಅದ್ಯಕ್ಷರಾದ ಕಮರುದ್ದೀನ್ ಅನ್ವಾರಿ ಅಹ್ಸನಿ ಮಡಿಕೇರಿ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ಲಾ ಹಿಮಮಿ ಸಖಾಫಿ, ಆಗಮಿಸಿದ್ದರು.

ಒಂದೊಂದು ಪಟ್ಟಣದಲ್ಲಿಯೂ ಆಲ್ಲಿನ ಕಾರ್ಯಕರ್ತರೂ ಸಾತ್ ನೀಡಿದರು.
ಗೋಲ್ಡನ್ ಫಿಫ್ಟಿ ಸಮ್ಮೇಳನದ ಯಶಸ್ವಿಗೆ ಸರ್ವರಿಗೂ ಕರೆ ನೀಡಿದರು.

error: Content is protected !! Not allowed copy content from janadhvani.com