janadhvani

Kannada Online News Paper

ಮಣಿಪುರ: ಗುಜರಾತ್ ಮಾದರಿ ಸರಕಾರಿ ಪ್ರಾಯೋಜಿತ ಜನಾಂಗೀಯ ಹತ್ಯೆ- ಕೆ.ಅಶ್ರಫ್

ಮಣಿಪುರದಲ್ಲಿ ನಡೆದ ಹತ್ಯೆ, ದೌರ್ಜನ್ಯ, ಸ್ತೀಯರ ನಗ್ನತೆಯ ಪ್ರದರ್ಶನ, ಬಲಾತ್ಕಾರ ನಾಗರಿಕ ವ್ಯವಸ್ಥೆ ನಾಚುವಂತದ್ದು ಮತ್ತು ಖಂಡನೀಯ

ಮಂಗಳೂರು: ಕಳೆದ ಎರಡು ತಿಂಗಳುಗಳಿಂದಲೂ ಹೆಚ್ಚು ಅನಿಯಂತ್ರಿತವಾಗಿ ನಡೆಯುತ್ತಿರುವ ಮಣಿಪುರ ಜನಾಂಗೀಯ ಹತ್ಯೆಯ ಹಿಂದೆ ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೊಂಬತ್ತರ ದಶಕದಲ್ಲಿ ಗೋದ್ರೂತ್ತರ ಗುಜರಾತ್ ನಲ್ಲಿ ನಡೆದ ಮುಸ್ಲಿಮರ ವಿರುದ್ಧದ ಸಾಮೂಹಿಕ ಗಲಭೆಯು ರಾಜ್ಯ ಪ್ರೇರಿತ ಮತ್ತು ಸರಕಾರದ ಪ್ರಾಯೋಜಿತ್ವದಲ್ಲಿಯೇ ನಡೆಸಲಾಗಿತ್ತು. ಇಂದು ಮಣಿಪುರದಲ್ಲಿ ನಡೆಯತ್ತಿರುವ ಸುಮಾರು 300 ಕ್ಕೂ ಅಧಿಕ ಜನರ ಹತ್ಯೆ, ಸಾವಿರಾರು ಜನರ ಊನತ್ವ, ಲಕ್ಷಾಂತರ ಜನರ ನಿರಾಶ್ರಯತೆ, ಅಸಂಖ್ಯಾತ ಸ್ತ್ರೀಯರನ್ನು ನಗ್ನ ಮೆರವಣಿಗೆ ಗೊಳಿಸಿ ಬಲಾತ್ಕಾರ ಕೃತ್ಯಗಳು ಕೂಡಾ ಸಂಘ ಪರಿವಾರ ಪ್ರೇರಿತ ಕೃತ್ಯ ಮತ್ತು ಸರಕಾರದ ಪ್ರಾಯೋಜತ್ವದಲ್ಲಿ ನಡೆಯುತ್ತಿದೆ.

ಈ ಹಿಂದೆ ಗುಜರಾತ್ ನಲ್ಲಿ ನಡೆದಂತೆ, ಭಾರತಾದ್ಯಂತ ಮತೀಯ ಉನ್ಮಾದತೆ ಸೃಷ್ಟಿಯೇ ಇಂದರ ಹಿಂದಿನ ಮಹಾ ಷಡ್ಯಂತ್ರವಾಗಿದೆ. ಅಲ್ಪ ಸಂಖ್ಯಾತ ಜನತೆಯ ವಿರುದ್ಧ ಬಹು ಸಂಖ್ಯಾತ ಪರಾಕ್ರಮವನ್ನು ದೇಶಾದಾದ್ಯಂತ ಪ್ರದರ್ಶನ ಗೊಳಿಸುವ ಪ್ರಯತ್ನವೇ ಮಣಿಪುರ ಘಟನೆಯ ಹಿಂದಿನ ಉದ್ದೇಶ ಆಗಿದೆ.

ಬಹು ಸಂಖ್ಯಾತ ಸಾಮಾನ್ಯ ಜನರು ಮತೀಯ ಪಾರಮ್ಯ ಚಿಂತನೆಯಿಂದ ಹೊರ ಬಂದು ಈ ದೇಶದ ಬಹುತ್ವ ಚಿಂತನೆಗೆ ಇನ್ನಾದರೂ ಶಕ್ತಿ ತುಂಬಬೇಕಿದೆ. ಮಣಿಪುರ ಘಟನೆಯನ್ನು ಸರ್ವರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಮಣಿಪುರದಲ್ಲಿ ನಡೆದ ಹತ್ಯೆ, ದೌರ್ಜನ್ಯ, ಸ್ತೀಯರ ನಗ್ನತೆಯ ಪ್ರದರ್ಶನ, ಬಲಾತ್ಕಾರ ನಾಗರಿಕ ವ್ಯವಸ್ಥೆ ನಾಚುವಂತದ್ದು ಮತ್ತು ಖಂಡನೀಯ.

ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com