janadhvani

Kannada Online News Paper

ತಾರತಮ್ಯ ನಿಲುವಿಗೆ ಸಿದ್ದರಾಮಯ್ಯ ತಿರುಗೇಟು ನೀಡಬೇಕಿದೆ: ಉದ್ಯೋಗ ಮರು ನೇಮಕ ಸ್ವಾಗತಾರ್ಹ-ಇಕ್ಬಾಲ್ ಬಾಳಿಲ

ಮಂಗಳೂರು: ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೊಲೆಗಳು ನಡೆದಾಗ ಒಂದು ಕುಟುಂಬಕ್ಕೆ ಮಾತ್ರ ಪರಿಹಾರ ಸಾಂತ್ವನ ನೀಡಿ ತಾರತಮ್ಯ ದೋರಣೆಯ ಮೂಲಕ ಮಾನವೀಯತೆಗೆ ಕೊಡಲಿಯೇಟು ನೀಡಿದ ಬಸವಾಜ್ ಬೊಮ್ಮಾಯಿಗೆ ತಿರುಗೇಟು ನೀಡಬೇಕೆಂದು SKSSF ರಾಜ್ಯ ನಾಯಕ, ಭಾವೈಕ್ಯ ಪರಿಷತ್ ಜಿಲ್ಲಾಧ್ಯಕ್ಷ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.

ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ತಾತ್ಕಾಲಿಕ ಉದ್ಯೋಗ ನೀಡಿದ ಬಿಜೆಪಿಯ ಕುತಂತ್ರವೂ ಬಹಿರಂಗಗೊಂಡಿದೆ.ಈ ನಿಟ್ಟಿನಲ್ಲಿ ಮರುನೇಮಕವೂ ಸ್ವಾಗತಾರ್ಹ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ, ಪ್ರವೀಣ್ ನೆಟ್ಟಾರು ಮನೆಗೆ ಬೇಟಿ ನೀಡಿ ಅಲ್ಲೇ ಪಕ್ಕದಲ್ಲಿದ್ದ ಮಸೂದ್ ಮನೆಗೆ ಹಾಗೂ ಸುರತ್ಕಲ್ ಫಾಝಿಲ್ ಮನೆಗೆ ಬೇಟಿ ನೀಡದೆ ತಾರತಮ್ಯ ದೋರಣೆಯ ಮೂಲಕ ಧರ್ಮಗಳ ಮದ್ಯೆ ಬಿರುಕಿಗೆ ಸೇತುವೆ ಕಟ್ಟಿಕೊಟ್ಟಿದ್ದಾರೆ.

ಈ ಸರಕಾರದ ನಿರೀಕ್ಷೆಯಲ್ಲಿರುವ ಎರಡು ಕುಟುಂಬಗಳಿಗೆ ಜೊತೆಗೆ ನೆಟ್ಟಾರ್ ಮನೆಗೂ ಮುಖ್ಯಮಂತ್ರಿಗಳು ಬೇಟಿ ನೀಡಿ ಮಾನವೀಯತೆಯನ್ನು ಜೀವಂತಗೊಳಿಸಲು ಕೋರಿದ್ದಾರೆ. ಇದರಿಂದ ಮಾಜಿ ಮುಖ್ಯಮಂತ್ರಿಯವರ ತಾರತಮ್ಯ ಧೋರಣೆಗೆ ಪಾಠ ಕಳಿಸಿದಂತಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com